ಧಾರವಾಡ : ತೀವ್ರ ಕುತೂಹಲ ಮೂಡಿಸಿದ ಧಾರವಾಡ ಲೋಕಸಭಾ ಕಾಂಗ್ರೆಸ್ ಟಿಕೆಟ್ ಕೊನೆಗೂ ಮೂರನೇ ಪಟ್ಟಿಯಲ್ಲಿ ಘೋಷಣೆಯಾಗಿದ್ದು, ನವಲಗುಂದ ಕಾಂಗ್ರೆಸ್‌ನ ಯುವ ನಾಯಕ ವಿನೋದ ಅಸೂಟಿಯನ್ನು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಟಿಕೆಟ್ ಗೋಷಣೆ ಮಾಡಲಾಗಿದೆ. ಅಭ್ಯರ್ಥಿ ಘೋಷಣೆಯ ಬಳಿಕ ಕಾಂಗ್ರೆಸ್‌ನ ಟಿಕೆಟ್ ಪಡೆದಕೊಂಡ ಅಸೂಟಿಯವರ ಲೋಕಸಭಾ ಅಭ್ಯರ್ಥಿ ಮೊದಲ ಸಭೆ ಧಾರವಾಡದಲ್ಲಿ ನಿಗದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯ ಕ್ಯಾಬಿನೆಟ್‌ನ ಟಾಫ್ 5 ಮಿನಿಸ್ಟರ್ ವೈಸಸ್ ನವಲಗುಂದ ಕಾಂಗ್ರೆಸ್ ಯಂಗ್ ಲೀಡರ್ ನಡುವೆ, ಈಗ ಧಾರವಾಡ ಲೋಕ ಕದನ ರಂಗು ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯ ಮೊದಲೇ ಐದನೇ ಬಾರಿಗೆ ಧಾರವಾಡ ಲೋಕಸಭಾ ಕಣದಲ್ಲಿರು ಜೋಶಿಯವರ ವಿರುದ್ಧ, ಕಾಂಗ್ರೆಸ್ ಪಕ್ಷದಿಂದ ವಿನೋದ್ ಅಸೂಟಿ ಸ್ಪರ್ಧೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಅಧಿಕೃತ ಘೋಷಣೆಯ ಬಳಿಕ ಈಗ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ನಾಲ್ಕು ಗಂಟೆಗೆ ಸಭೆ ನಿಗದಿ ಮಾಡಲಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ನ ಭೂತ ಮಟ್ಟದ ನಾಯಕರಿಂದ ಹಿಡಿದು, ಜಿಲ್ಲಾಧ್ಯಕ್ಷರು ಹಾಗೂ ಹಿರಿಯನಾಯಕರು ಹಾಲಿ ಶಾಸಕರು ಸಚಿವರು ಸೇರಿ ಮಾಜಿ ಹಿರಿಯ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಕಾಂಗ್ರೆಸ ಅಭ್ಯರ್ಥಿ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ. ಈಗಾಗಲೇ ಬಿಜೆಪಿ ಧಾರವಾಡ ಲೋಕಸಭಾ ಅಭ್ಯರ್ಥಿ ಪಕ್ಷದ ಸಭೆಯ ಮೂಲಕ ಚುನಾವಣೆ ಸುದ್ಧತೆಯಲ್ಲಿ ಬ್ಯೂಸಿಯಾಗಿದ್ದು, ಕಾಂಗ್ರೆಸ್ ಕೂಡಾ ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ಹಾಗೂ ಇತಿಹಾಸ ಮರು ಸ್ಥಾಪಿಸಲು ರಣತಂತ್ರವನ್ನು ಈ ಸಭೆಯಲ್ಲಿ ಹೆಣೆಯಲಿದ್ದಾರೆ ಎಂದು ಹೇಳಲಾಗುತ್ತಿದೆ