ಹಾವೇರಿ: ಮದುವೆಯಾಗಲು ನಿರಾಕರಿಸಿದಳೆಂಬ ಕಾರಣಕ್ಕೆ ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಮಾವ ಹತ್ಯೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೈಚವಳ್ಳಿಯಲ್ಲಿ ನಡೆದಿದೆ.
ದೀಪಾ ಗೊಂದಿ (21) ಕೊಲೆಯಾದ ಯುವತಿ. ಮಾಲತೇಶ ಬಾರ್ಕಿ (35) ಕೊಲೆ ಮಾಡಿದ ಆರೋಪಿ. ಸಂಬಂಧದಲ್ಲಿ ಸೊಸೆಯಾಗಿದ್ದ ದೀಪಾಳೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಾವ ಮಾಲತೇಶ. ಏಪ್ರಿಲ್ 22ರಂದು ದೀಪಾ ಮತ್ತು ಮಾಲತೇಶ್ ಮದುವೆ ಫಿಕ್ಸ್ ಆಗಿತ್ತು. ಮದುವೆ ತಯಾರಿ ನಡೆಸಿದ್ದರು. ಆದರೆ ಅದೇನಾಯ್ತೋ ನಿಶ್ಚಿತಾರ್ಥದ ಬಳಿಕ ಮಾವನೊಂದಿಗೆ ಮದುವೆಯಾಗಲು ದೀಪಾ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಮಾವ ಸೊಸೆಯನ್ನು ಉಪಾಯದಿಂದ ಹೊರಗಡೆ ಕರೆದುಕೊಂಡು ಹೋಗಿ ವಿಷ ಕುಡಿಸಿದ ಬಳಿಕ ನೇಣು ಹಾಕಿ ಹತ್ಯೆ ಮಾಡಿದ್ದಾನೆ. ಕೃತ್ಯ ನಡೆದ ಐದು ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾನಗಲ್ ಠಾಣೆ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ.