RAICHURರಾಜ್ಯಸುದ್ದಿಹಣಕಾಸು

ಲಕ್ಷಾಂತರ ರೂಪಾಯಿ ಬೆಲೆ ಬಾಳುವ 300 ಚೀಲ ಭತ್ತ ಭಸ್ಮ; ಕಂಗಾಲಾದ ಅನ್ನದಾತ..!

ರಾಯಚೂರು: ಉತ್ತಮ ಬೆಲೆ ಸಿಗಲಿ ಎಂದು ಕಾದು ಕುಳಿತಿದ್ದ ರೈತನ ಆಸೆಗೆ ವಿಧಿ ಬೆಂಕಿ ಇಟ್ಟಿದೆ. ಆಕಸ್ಮಿಕ ಅಗ್ನಿ ಅವಘಡದಲ್ಲಿ ಸುಮಾರು 300ಕ್ಕೂ ಹೆಚ್ಚು ಭತ್ತದ ಚೀಲಗಳು ಸುಟ್ಟು ಕರಕಲಾಗಿರುವ ಘಟನೆ ಸಿಂಧನೂರು ನಗರದ ಹೊರವಲಯದಲ್ಲಿ ನಡೆದಿದೆ.

ಸಿಂಧನೂರಿನ ರೈತ ಮಹಮ್ಮದ್ ಯೂಸಫ್ ಎಂಬುವವರು ತಮ್ಮ ಜಮೀನಿನಲ್ಲಿರುವ ದನದ ಶೆಡ್‌ನಲ್ಲಿ ಸುಮಾರು 300 ಚೀಲ ಆರ್‌ಎನ್‌ಆರ್ ತಳಿಯ ಭತ್ತವನ್ನು ಸಂಗ್ರಹಿಸಿಟ್ಟಿದ್ದರು. ಮಾರುಕಟ್ಟೆಯಲ್ಲಿ ಉತ್ತಮ ದರ ಬಂದಾಗ ಮಾರಾಟ ಮಾಡೋಣ ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ಈ ದುರಂತ ಅರಗಿಸಿಕೊಳ್ಳಲಾಗದ ನೋವು ತಂದಿದೆ.

ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಭತ್ತ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬೆಂಕಿಯ ತೀವ್ರತೆಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದ ದನದ ಶೆಡ್ ಕೂಡ ನೆಲಸಮವಾಗಿದೆ.

Comments (0)

Your email address will not be published. Required fields are marked *

Back to top button