Top Newsಕ್ರೈಂ ಸ್ಟೋರಿರಾಜ್ಯವೈರಲ್ ನ್ಯೂಸ್ಸುದ್ದಿ

3 ವರ್ಷದ ಮಗುವಿನ ಮೇಲೆ ತಂದೆಯ ಸ್ನೇಹಿತನಿಂದಲೇ ದೌರ್ಜನ್ಯ!

ಆಂಧ್ರಪ್ರದೇಶ: ವಿಶಾಖಪಟ್ಟಣದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಹೀನ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಮೂರು ವರ್ಷದ ಹಸುಗೂಸಿನ ಮೇಲೆ ತಂದೆಯ ಸ್ನೇಹಿತನೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ತಂದೆಯನ್ನು ಭೇಟಿಯಾಗುವ ನೆಪದಲ್ಲಿ ಮನೆಗೆ ಬಂದಿದ್ದ ಆರೋಪಿಯು, ಮನೆಯಲ್ಲಿ ತಂದೆ ಇಲ್ಲದ ಸಮಯ ನೋಡಿ ಮಗುವಿಗೆ ಬಿಸ್ಕತ್ತು ಕೊಡಿಸುವ ಆಮಿಷವೊಡ್ಡಿ ಹತ್ತಿರದ ಅಂಗಡಿಗೆ ಕರೆದೊಯ್ದು ಈ ಅಮಾನವೀಯ ಕೃತ್ಯ ಎಸಗಿದ್ದಾನೆ. ಮಗುವನ್ನು ವಾಪಸ್ ಬಿಟ್ಟು ಆರೋಪಿ ಪರಾರಿಯಾದ ನಂತರ, ಮಗು ನಿರಂತರವಾಗಿ ಅಳುತ್ತಿರುವುದನ್ನು ಕಂಡು ತಾಯಿ ಪರೀಕ್ಷಿಸಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಈಗಾಗಲೇ ಪೊಲೀಸರು ಬಿಎನ್‌ಎಸ್ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರಾಯಪತಿ ಶೈಲಜಾ ಅವರು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೂಚಿಸಿದ್ದಾರೆ. ಪರಿಚಿತರೇ ಇಂತಹ ಕ್ರೂರ ಕೃತ್ಯಕ್ಕೆ ಕೈಹಾಕಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಸಮಾಜದಲ್ಲಿ ಹೆಣ್ಣುಮಕ್ಕಳ ಮತ್ತು ಚಿಕ್ಕ ಮಕ್ಕಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.

Comments (0)

Your email address will not be published. Required fields are marked *

Back to top button