ಜಿಲ್ಲೆ
ಬೆಳೆಗೆ ಪರಿಹಾರ ನೀಡಬೇಕೆಂದು ರೈತರ ಆಗ್ರಹ

ಬೆಳಗಾವಿ : ಬೆಳಗಾವಿಯಲ್ಲಿ ವಕೀಲರ ಪ್ರತಿಭಟನೆ ಅಂತ್ಯವಾಗುತ್ತಿದ್ದಂತೆಯೆ ರೈತರ ಪ್ರತಿಭಟನೆ ಪ್ರಾರಂಭವಾಗಿದೆ. ನಗರದ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರೊಟೆಸ್ಟ್ ನಡೆಸಲಾಗುತ್ತಿದೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ಹೊರಹಾಕಿದರು.

ರೈತರ ಬೆಳೆಗೆ ಪರಿಹಾರ ನೀಡಬೇಕು. ಎಂಎಸ್ಪಿ ಶಾಸನಬಧ್ಧವಾಗಿ ಜಾರಿ ಆಗಬೇಕು. ಪ್ರತಿ ಲೀಟರ್ ಹಾಲಿಗೆ 50 ರೂಪಾಯಿ ದರ ನಿಗದಿಪಡಿಸಬೇಕು. ಮಹದಾಯಿ ಎತ್ತಿನಹೊಳೆ ಸೇರಿದಂತೆ ನೀರಾವರಿ ಯೋಜನೆಯ ಜಾರಿಯಾಗಬೇಕು ಎಂದು ರೈತರು ಆಗ್ರಹಿಸಿದರು.




