ದೊಡ್ಮನೆ ಕುಡಿ, ರಾಜಣ್ಣನ ಮೊಮ್ಮಗ ಯುವ ರಾಜ್‌ಕುಮಾರ್ ಯುವ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರೆ. ಯುವ ರಾಜ್‌ಕುಮಾರ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಯುವ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ ಎನ್ನಲಾಗ್ತಿದೆ. ದೇಶದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದಿರುವ ಹೊಂಬಾಳೆ ಫಿಲ್ಮ್ಸ್ ಯುವ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಿಸಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ತಂಡ ಯುವ ಸಿನಿಮಾದ ಬಿಗ್ ಅಪ್ಡೇಟ್ ನೀಡಿದೆ.
ಯುವ ಸಾಂಗ್ ರಿಲೀಸ್ಗೆ ಡೇಟ್ ಫಿಕ್ಸ್
ಆನಂದ್ ರಾಮ್ ನಿರ್ದೇಶನದ, ನಟ ಯುವ ರಾಜ್‌ಕುಮಾರ್ ಅಭಿನಯದ ಯುವ ಸಿನಿಮಾ ಮೊದಲ ಹಾಡು ರಿಲೀಸ್ ಆಗ್ತಿದೆ. ಮಾರ್ಚ್ 2 ರಂದು ಯುವರಾಜ್ ಕುಮಾರ್ ಚಿತ್ರದ ಮೊದಲ ಸಾಂಗ್ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಚಾಮರಾಜನಗರದಲ್ಲಿ ಸಾಂಗ್ ರಿಲೀಸ್ ಇವೆಂಟ್
ಚಿತ್ರರಂಗಕ್ಕೆ ಯುವರಾಜ್ ಕುಮಾರ್ ಗ್ರ್ಯಾಂಡ್ ಎಂಟ್ರಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಯುವ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರದ ಪ್ರಚಾರ ಮಾಡುತ್ತಾ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾದ ಪೋಸ್ಟರ್ ಕೂಡ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ಈ ನಡುವೆ ಯುವ ಸಿನಿಮಾದ ಮೊದಲ ಹಾಡು ರಿಲೀಸ್ಗಾಗಿ ದೊಡ್ಡ ವೇದಿಕೆ ಕೂಡ ಸಿದ್ಧವಾಗಿದೆ.
ಒಬ್ಬನೇ ಶಿವ, ಒಬ್ಬನೇ ಯುವ ಹಾಡು ರಾಜ್‌ಕುಮಾರ್ ಹುಟ್ಟೂರು ಚಾಮರಾಜನಗರದಲ್ಲಿ ಯುವ ಸಿನಿಮಾದ ಮೊದಲ ಸಾಂಗ್ ರಿಲೀಸ್ ಇವೆಂಟ್ ನಡೆಯಲಿದೆ. ಚಾಮರಾಜನಗರದ ಟೆಂಪಲ್ ಗ್ರೌಂಡ್ನಲ್ಲಿ ಒಬ್ಬನೇ ಶಿವ, ಒಬ್ಬನೇ ಯುವ ಹಾಡು ರಿಲೀಸ್ ಆಗಲಿದೆ. ಕಾರ್ಯಕ್ರಮಕ್ಕೆ ನೀವು ಬನ್ನಿ ಎಂದು ಚಿತ್ರತಂಡ ಜನರನ್ನು ಆಹ್ವಾನಿಸಿದೆ.
https://x.com/hombalefilms/status/1762005691479511367?s=20
ಯುವ ಚಿತ್ರದ ಹೊಸ ಅಪ್ಡೇಟ್!
ಯುವ’ ಪಕ್ಕಾ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಎನ್ನಲಾಗ್ತಿದೆ. ಕಾಂತಾರ ನಟಿ ಸಪ್ತಮಿ ಗೌಡ ಯುವ ಸಿನಿಮಾಗೆ ನಾಯಕಿಯಾಗಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವ ರಾಜ್ ಕುಮಾರ್ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಜ್ ಮೊಮ್ಮಗನನ್ನು ಮಾಸ್ ಅವತಾರದಲ್ಲಿ ತೋರಿಸಲು ಯುವರಾಜ್ ಕುಮಾರ್ ಸಖತ್ ಪ್ಲಾನ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಚಿತ್ರತಂಡ ಯುವ ಸಿನಿಮಾ ರಿಲೀಸ್ ಡೇಟ್ ಮುಂದೂಡಿತ್ತು. ಇದೀಗ ಸಿನಿಮಾ ಹಾಡು ರಿಲೀಸ್ ಮಾಡಲು ಡೇಟ್ ಫಿಕ್ಸ್ ಮಾಡಿದೆ.
ಸ್ಯಾಂಡಲ್‌ವುಡ್ ಯುವ ಸಿನಿಮಾ ಸಾಂಗ್ ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊನ್ನೆ ಮೊನ್ನೆ ಚಿತ್ರದ ತಂಡ ಲೇಹ್ ಲಡಾಖ್‌ಗೆ ಹೋಗಿತ್ತು. ಅಲ್ಲಿ ರೋಮ್ಯಾಂಟಿಕ್ ಹಾಡನ್ನ ಚಿತ್ರೀಕರಿಸೋಕೇನೆ ಹೋಗಿತ್ತು. ನಟಿ ಸಪ್ತಮಿ ಗೌಡ ನಟ ಯುವರಾಜ್ ಕುಮಾರ್ ಸೇರಿದಂತೆ ಪುನೀತ್ ಮಗಳು ವಂದಿತಾ ಪುನೀತ್ ಕೂಡ ಚಿತ್ರತಂಡ ಜೊತೆ ಕಾಣಿಸಿಕೊಂಡಿದ್ರು. ಯುವ ಚಿತ್ರಕ್ಕೆ ಶ್ರೀಶ ಕುದುವಳ್ಳಿ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಮೊದಲ ಟೀಸರ್ ನೋಡಿದ್ರೆ ಸಾಕು, ಶ್ರೀಶ ಕುದುವಳ್ಳಿ ಕೆಲಸ ಹೇಗಿದೆ ಅನ್ನೂದು ತಿಳಿಯುತ್ತದೆ. ಲೇಹ್ ಲಡಾಖ್‌ನ ಸುಂದರ ತಾಣಗಳೂ ಶ್ರೀಶ ಕುದುವಳ್ಳಿ ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿಯೇ ಮೂಡಿ ಬಂದಿವೆ ಎನ್ನಲಾಗ್ತಿದೆ.
https://youtu.be/gUq3xn4bKhM?si=vX7PYuNhO6FdOvSR