ನೆಲಮಂಗಲ: ಸ್ನೇಹಿತೆಯ ರೂಂಗೆ ಯುವತಿಯನ್ನು ಕರೆದೊಯ್ದು ಯುವಕ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ನಡೆದಿದೆ..
ಭಾನುವಾರ ಬೆಳ್ಳಗ್ಗೆ ಪ್ರೇಮ್ ವರ್ಧನ್ ಎಂಬ ಯುವಕ 21 ವರ್ಷದ ದೇವಿಶ್ರೀಯನ್ನು ಸ್ನೇಹಿತೆ ರೋಂಗೆ ಕರೆದುಕೊಂಡು ಹೋಗಿ, ಕೊಲೆ ಮಾಡಿದ್ದಾನೆ.. ಇಂದು ಬೆಳಗ್ಗೆ ಕೊಲೆಯ ಸುದ್ದಿ ಬೆಳಕಿಗೆ ಬಂದಿದೆ.. ಘಟನೆ ಸಂಬಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಎಫ್ಐಆರ್ ದಾಖಲಾಗಿದ್ದು, ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಯುವಕ ಫ್ರೇಮ್ ವರ್ಧನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..
ದೇವಿಶ್ರೀ ಮೂಲತಃ ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಯಾಗಿದ್ದು, ತನ್ನ ವ್ಯಾಸಂಗಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಳು.. ಇಲ್ಲಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಳು. ಇನ್ನು ಪ್ರೇಮ್ ವರ್ಧನ್ ದೇವಿಶ್ರೀಯನ್ನು ಏಕೆ ಕೊಲೆ ಮಾಡಿದ್ದ ಎನ್ನುವು ಪೊಲೀಸ್ ತನಿಖೆಯಲ್ಲಿ ತಿಳಿಯಬೇಕಿದೆ..
ಕೊಲೆಯ ವಿಚಾರದ ಬಗ್ಗೆ ದೇವಿಶ್ರೀ ದೊಡ್ಡಮ್ಮ ಮಾತನಾಡಿ, ಮಗಳು ಇಲ್ಲಿಗೆ ಓದಲಿಕ್ಕೆ ಬಂದಿದ್ದಾಳೆ. ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತಾನಾಡಿದ್ದಾಳೆ. ಆಮೇಲೆ ಕಾಲ್ ಮಾಡಿದ್ರೂ ಫೋನ್ ಪಿಕ್ ಮಾಡಿಲ್ಲ. ಅವಳ ಸ್ನೇಹಿತೆ ಕರೆ ಮಾಡಿ ಅವರ ರೂಂಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಏನಾಗಿದೆ ಗೊತ್ತಿಲ್ಲ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.


