Top Newsರಾಜ್ಯಸುದ್ದಿ

ಜಾಲಹಳ್ಳಿ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಜಿಗಿದ ಮಾಜಿ ಏರ್‌ಫೋರ್ಸ್‌ ಅಧಿಕಾರಿ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೆಟ್ರೋ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಘಟನೆಗಳು ಹೆಚ್ಚಾಗುತ್ತಿವೆ. ಹಸಿರು ಮಾರ್ಗದ ನಾಗಸಂದ್ರ-ರೇಷ್ಮೆ ಸಂಸ್ಥೆ ನಡುವಿನ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಹಳಿಗೆ ಜಿಗಿದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಇದೀಗ ಬೆಳಗ್ಗೆ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮೆಟ್ರೋ ರೈಲು ಬರುತ್ತಿದ್ದಾಗ 49 ವರ್ಷದ ವಾಯುಪಡೆಯ ಮಾಜಿ ವ್ಯಕ್ತಿಯೊಬ್ಬರು ಟ್ರ್ಯಾಕ್‌ಗೆ ಹಾರಿದ್ದಾರೆ. ಆದರೆ, ಮೆಟ್ರೋ ಸಿಬ್ಬಂದಿಯ ಸಮಯೋಚಿತ ಕ್ರಮದಿಂದಾಗಿ ಅವರ ಜೀವ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಟ್ರೈನ್ ಬರ್ತಿರೋದನ್ನ ನೋಡಿಕೊಂಡು ಹಳಿಗೆ ಹಾರಿದ ವ್ಯಕ್ತಿ, ಎರಡು ಟ್ರ್ಯಾಕ್ ಗಳ ನಡುವೆ ಮಲಗಿದ್ದ. ರೈಲಿನ ಲೋಕೋಪೈಲಟ್‌ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ ಮೆಟ್ರೋ ಹಳಿಗೆ ವ್ಯಕ್ತಿ ಹಾರುತ್ತಿದ್ದಂತೆ ಮೆಟ್ರೋ ರೈಲನ್ನು ಲೋಕೋಪೈಲಟ್‌ ನಿಲ್ಲಿಸಿದ್ದಾರೆ. ಇದರಿಂದ 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. 10.45ರ ನಂತರ ಮತ್ತೆ ಮೆಟ್ರೋ ಸಂಚರ ಆರಂಭವಾಗಿದೆ. ಹಸಿರು ಮಾರ್ಗದ ಸಿಲ್ಕ್ ಇನ್ಸ್ಟಿಟ್ಯೂಟ್‌ನಿಂದ ಮಾದಾವರ ಮಾರ್ಗದಲ್ಲಿ ಜಾಲಹಳ್ಳಿ ಮೆಟ್ರೋ ಸ್ಟೇಷನ್‌ ಇದೆ. ಸದ್ಯ ಯುವಕನನ್ನು ಮೆಟ್ರೋ ಸಿಬ್ಬಂದಿ ರಕ್ಷಿಸಿದ್ದು, ಬಿಎಂಆರ್ಸಿಎಲ್ ಅಧಿಕಾರಿಗಳು ಈತನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button