ದರ್ಶನ್ ಆರೋಗ್ಯಕ್ಕೆ ಏನಾಯಿತು ? ಏಕಾಏಕಿ ಆ ವ್ಯಕ್ತಿಯನ್ನು ಬಳ್ಳಾರಿ ಜೈಲು ಆಸ್ಪತ್ರೆ ವೈದ್ಯರು ಮುಗಿಬಿದ್ದಿದ್ದೇಕೆ ? ಚಾರ್ಜ್ಶೀಟ್ ವಿಷಯ ಕೇಳಿ ದಾಸ ಕೆರಳಿ ಕೆಂಡವಾದರಾ ? ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಬಿಕ್ಕಿ ಬಿಕ್ಕಿ ಅತ್ತರಾ ? ಆ ಮನಕಲುಕುವ ಸಿನಿಮಾ ಇಲ್ಲಿದೆ…
ಬಳ್ಳಾರಿ ಜೈಲಿನ ಹದಿನೈದನೇ ಸೆಲ್‌ನಲ್ಲಿ ಬೀಡು ಬಿಟ್ಟಿರುವ ದರ್ಶನ್ ಸುತ್ತ ವೈದ್ಯರು ನಿಂತುಬಿಟ್ಟರು. ಅವರ ಬ್ಲಡ್ ಪ್ರೆಶರ್ ಹಾಗೂ ಶುಗರ್ ಲೆವೆಲ್‌ನಲ್ಲಿ ಏನಾದರೂ ಹೆಚ್ಚು ಕಮ್ಮಿ ಆಗಿಬಿಟ್ಟಿತಾ ? ಹೃದಯ ಹದವಾಗಿ ಬಾಯಿ ಬಡಿದುಕೊಳ್ಳುತ್ತಿದೆಯಾ ? ಆರಡಿ ಕಟೌಟ್…ಕಂಬಿ ಹಿಂದೆ ಫಿಟ್ ಆಗಿದೆಯಾ ಅಥವಾ ನೆಟ್ಟಗೇ ನಿಲ್ಲಲು ಒದ್ದಾಡುತ್ತಿದೆಯಾ ? ಸರ್ವ ತಪಾಸಣೆಯನ್ನು ವೈದ್ಯರು ಮಾಡಿ, ಬಿಲ್‌ಕುಲ್ ನಾರ್ಮಲ್ ಎಂದಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಖಾಕಿ ಇಟ್ಟ ಸುರಸುರಬತ್ತಿ. ಅದೇ ಚಾರ್ಜ್ಶೀಟ್ ಕತಿ…
ಚಾರ್ಜ್ಶೀಟ್ ಬಿದ್ದಿದೆ. ಡಿ ಗ್ಯಾಂಗ್ ಯಾವುದೇ ಮೂಲೆಯಿಂದಲೂ ತಪ್ಪಿಸಿಕೊಳ್ಳಬಾರದು. ಹಾಗಿದೆ ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ. ಅದರ ಪರಿಣಾಮ ದರ್ಶನ್ ಮೇಲಾಗಿದೆ. `ಏನ್ರೀ ಮೀಡಿಯಾ…?’ ಹೀಗಂತ ಗುಡುಗುತ್ತಿದ್ದ ದಾಸ…`ಹಿಂಗ್ಯಾಕಾಯ್ತೋ ಕರಿಯ…’ ಎಂದು ಸ್ವಗತದಲ್ಲಿ ಮಾತಾಡಿಕೊಳ್ಳುತ್ತಿದ್ದಾನೆ. ದಚ್ಚು ಬಾಡಿ ಸಬ್ ಕುಚ್ ಠೀಕ್ ಹೈ ಎನ್ನುವಾಗಲೇ ಇನ್ನೊಂದು ಕಡೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಆಕಾಶ ನೋಡುತ್ತಾ ಕಣ್ಣೀರು ಇಳಿಸುತ್ತಿದ್ದಾಳೆ. ಆಕೆಯ ಸಂಕಟಕ್ಕೆ ಸಕಲ ಮಹಿಳಾ ಕುಲ ಬಿದ್ದುಒದ್ದು ನಗುತ್ತಿದೆ.
ಯಾವಾಗ ಚಾರ್ಜ್ಶೀಟ್ ಸುದ್ದಿ ಹೊರಬಿತ್ತೋ…ದರ್ಶನ್ ದಿಕ್ಕೆಟ್ಟು ಕುಂತಿದ್ದಾರೆ. ಪತ್ನಿ ವಿಜಯಲಕ್ಷಿö್ಮÃಗೆ ಫೋನ್ ಮಾಡಬೇಕೆಂದು ಹಠ ಹಿಡಿದಿದ್ದಾರೆ. ಮೊಬೈಲ್ ಸಂಖ್ಯೆ ಕೊಟ್ಟು ಕಾಯುತ್ತಿದ್ದಾರೆ. ಆದರೆ ಪೊಲೀಸರು ಅದಕ್ಕೆ ಇದುವರೆಗೆ ಓಕೆ ಎಂದಿಲ್ಲ. ಪರಪ್ಪನ ಅಗ್ರಹಾರದಲ್ಲಿದ್ದಾಗ ಬರೀ ಮನೆ ಊಟ ಕೇಳುತ್ತಿದ್ದ ದಾಸ ಈಗ ಟಿವಿ ಬೇಕೆಂದು ಮನವಿ ಮಾಡಿದ್ದಾರೆ. ನಾಲ್ಕು ಗಂಟೆ ಹೊತ್ತಿಗೆ ಅವರ ಐಷಾರಾಮಿ ಬಳ್ಳಾರಿ ಸೆಲ್‌ನಲ್ಲಿ ಟಿವಿ ರಾರಾಜಿಸಲಿದೆ. ಅದರಲ್ಲಿ ಏನ್ರೀ ಮೀಡಿಯಾ ವತಿಯಿಂದ ಮಂಗಳಕರ ಸುದ್ದಿಗಳು ಬುಧವಾರದಿಂದ ಸತತವಾಗಿ ಪ್ರಸಾರವಾಗಲಿವೆ…
ಇದು ನೋಡಿ ರೇಣುಕಾ ಸ್ವಾಮಿಯನ್ನು ಬೂಟುಗಾಲಿನಿಂದ ಒದ್ದು, ಸಿಗರೇಟಿನಿಂದ ಸುಟ್ಟು, ಚಿಕನ್ ಪೀಸ್ ತಿನ್ನಿಸಿ ಪುಣ್ಯ ಕಟ್ಟಿಕೊಂಡಾತನ ಹಾಲಿ ಗತಿ. ಇಷ್ಟಕ್ಕೇ ಎಲ್ಲಾ ಮುಗಿಯಿತಾ ? ಅದೆಂಗ್ರಿ ಆಗುತ್ತೆ…? ಈಗ ಟ್ರೆöÊಲರ್ ಬಿಟ್ಟಿದ್ದಾರೆ. ಈಸ್ಟ್ಮನ್ ಕಲರ್…ಸಿಕ್ಸ್ಟ್ರಾö್ಯಕ್ ಸ್ಟೀರಿಯೋಫೋನಿಕ್ ಸಿನಿಮಾ ರಿಲೀಸ್ ಬಾಕಿ ಇದೆ. ಅದರ ಚಿತ್ರಕತೆಯನ್ನು ಖುದ್ದು ದರ್ಶನ್ ಬರೆದಿದ್ದಾರೆ. ಪವಿತ್ರಾಗೌಡ ನಿರ್ದೇಶಕಿ. ಡಿ ಗ್ಯಾಂಗ್ ರಿಯಲಿಸ್ಟಿಕ್ ಕಲಾವಿದರು. ಕತೆ ಬರೆದು ಅಭಿನಯಕ್ಕೂ ಜೀವ ತುಂಬೋದು ದರ್ಶನ್. ನಿರ್ದೇಶನದ ಜೊತೆಗೆ ನಾಯಕಿ ಜವಾಬ್ದಾರಿಯನ್ನು ಖುದ್ದು ಪವಿತ್ರಾ ಗೌಡ ಹೊತ್ತು ಮೆರೆಸಲಿದ್ದಾಳೆ.
ಬಾಸ್ ಬೇಗ ಬಂದ್ಬಿಡಿ ಬಾಸ್…ನಿಮ್ಮನ್ನು ಅಲ್ಲಿ ನೋಡೋಕೆ ಆಗ್ತಿಲ್ಲ…’ ಅಭಿಮಾನಿಗಳ ಆಕ್ರಂದನ ಅನ್ಯಜೀವಿ ಗೃಹಕ್ಕೂ ಮುಟ್ಟಿದೆ. ಮಾಲಾಶ್ರೀ, ಸಂಜನಾ ಗಲ್ರಾನಿ…ಜೊತೆಗೆ ರಚಿತಾ ರಾಮ್ ಕೂಡ ಪಟಾಲಮ್ಮ ದೇವಸ್ಥಾನಕ್ಕೆ ಹೋಗಿ ಉರುಳುಸೇವೆ ಮಾಡುತ್ತಿದ್ದಾರೆ. `ಬಾ ಬಾರೋ ರಣಧೀರ…ರೇಣುಕಾಸ್ವಾಮಿ ಕೊಂದ ಕಾಟೇರ…’ ಈ ಹಾಡಿಗೆ ಮಲಗಿದಲ್ಲೇ ಕಂಠ ಕುಣಿಸುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್-ದೊಡ್ಡಣ್ಣ…ಇಮ್ಮಿಡಿಯೆಟ್ `ಕಂಬಿ ಕದಲಿಸುವ ಯಜ್ಞ’ ಮಾಡಲು ಪೂಜಾರಿಗಳನ್ನು ಕಂಡಕAಡಲ್ಲಿ ಹುಡುಕಾಡುತ್ತಿದ್ದಾರೆ. ಫಲಿತಾಂಶ ಮತ್ತು ಉಷ್ಣಾಂಶ…ಕರುನಾಡು ನಿತ್ಯ ಒಂದು ತುತ್ತನ್ನು ಕಾಗೆಗೆ ಹಾಕಲಿದೆ…ಓಂನಮಃ ಶಿವಾಯಃ…
-ಮಹೇಶ್ ದೇವಶೆಟ್ಟಿ, ಫ್ರಿಲ್ಮ್ಬ್ಯೂರೊ, ಫ್ರಿಡಂ ಟಿವಿ