- ತುಮಕೂರಿನಲ್ಲಿ ಸಚಿವ vs ಮಾಜಿ ಸಚಿವ..
- ರಾಜಣ್ಣ ಸಹಕಾರ ಕ್ಷೇತ್ರಕ್ಕೆ ನೀವು ಲಾಯಕ್ಕಿಲ್ಲ..!
- ಸಹಕಾರ ಕ್ಷೇತ್ರಕ್ಕೆ ರಾಜಿನಾಮೆ ನೀಡಿ ..!
- K.N.ರಾಜಣ್ಣ ವಿರುದ್ದ J.C.ಮಾಧುಸ್ವಾಮಿ ನಿಗಿನಿಗಿ..
ತುಮಕೂರು : ಚುನಾವಣೆ ಎರಡು ದಿನ ಮುಂಚೆ ನಾಮ ನಿರ್ದೇಶನ ಮಾಡಿ ತುಮುಲ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಇಡೀ ರೈತ ಸಮುದಾಯದ ಮುಖದ ಮೇಲೆ ಬಾರಿಸಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಹಕಾರ ಕ್ಷೇತ್ರಕ್ಕೆ ಲಾಯಕ್ಕಿಲ್ಲ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿ ರಾಜಿನಾಮೆ ಕೊಡುವುದು ಸೂಕ್ತ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹರಿಹಾಯ್ದರು.
ನಂದಿನಿ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಗುರುವಾರ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ತುಮುಲ್ ನೂತನ ನಿರ್ದೇಶಕ ಬುಳ್ಳೆನಹಳ್ಳಿ ಶಿವಪ್ರಕಾಶ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರಕಾರದಿಂದ ಸಹಕಾರ ಕ್ಷೇತ್ರವನ್ನು ಉಳಿಸುವ ಕೆಲಸವಾಗುತ್ತಿಲ್ಲ ಎಂದು ಕಿಡಿಕಾರಿದರು.


