Freedom TV
ಯತ್ನಾಳ್ ಉಚ್ಚಾಟನೆ; ಬೆಂಬಲಿಗರ ರಾಜೀನಾಮೆ ಪರ್ವ

ವಿಜಯಪುರ: ಸತತವಾಗಿ ಪಕ್ಷದ ವಿರುದ್ಧ ಹೇಳಿಕೆ ನೀಡಿ ಸದ್ಯ ಬಿಜೆಪಿ ಪಕ್ಷದಿಂದ ಉಚ್ಚಾಟಿತರಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಿಗರಿಂದ ರಾಜಿನಾಮೆ ಪರ್ವ ಶುರುವಾಗಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಕೇಂದ್ರ ಹೈಕಮಾಂಡ್ ನಿಲುವನ್ನು ಖಂಡಿಸಿ ವಿಜಯಪುರ ನಗರ ಮಂಡಲದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ ಎಲ್ಲ ಮೋರ್ಚಾಗಳ 174 ಪದಾಧಿಕಾರಿಗಳು ಅಧಿಕೃತವಾಗಿ ಗುರುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ, ತಮ್ಮ ಆಕ್ರೋಶ ಹೊರಹಾಕಿದ್ದಾರೆ.



