Top Newsಸಿನಿಮಾಸುದ್ದಿ

ಹೊಸ ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ

ಸದ್ಯ ಸ್ಯಾಂಡಲ್​​ವುಡ್​​ನಲ್ಲಿ ಸಿನಿಮಾಗಳ ಶೂಟಿಂಗ್ ಕೆಲಸ​ ಜೋರಾಗಿ ನಡೆಯುತ್ತಿದೆ. ಕೆಜಿಎಫ್​ ಬಳಿಕ ಯಶ್​ ಅವರು ಟಾಕ್ಸಿಕ್​​ನಲ್ಲಿ ಬ್ಯುಸಿ ಇದ್ದರೇ, ಇತ್ತ ಶಿವಣ್ಣ ಕೂಡ ತಮ್ಮ 131ನೇ ಸಿನಿಮಾ ಶೂಟಿಂಗ್​ನಲ್ಲಿ ಫುಲ್ ಬ್ಯುಸಿ ಇದ್ದಾರೆ. ಇಂತಹ ಬ್ಯುಸಿ ಸಮಯದಲ್ಲೇ ರಾಕಿಂಗ್ ಸ್ಟಾರ್ ಯಶ್ ಹಾಗೂ ಶಿವಣ್ಣ ಇಬ್ಬರು ಪರಸ್ಪರ ಭೇಟಿಯಾಗಿ ಕೆಲ ಸಮಯ ಚರ್ಚೆ ಮಾಡಿದ್ದಾರೆ.

ಸಿನಿಕಾನ್ ಸಿಟಿಯ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಟಾಕ್ಸಿಕ್​ ಸಿನಿಮಾಕ್ಕಾಗಿ ಅದ್ಧೂರಿ ಸೆಟ್​ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಇದರಲ್ಲಿ ಹಲವಾರು ಕಲಾವಿದರು, ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ ಇದೇ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರ 131ನೇ ಸಿನಿಮಾ ಶೂಟಿಂಗ್ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಎರಡು ಸಿನಿಮಾಗಳು ಒಂದೇ ಸ್ಥಳದಲ್ಲಿ ಶೂಟಿಂಗ್ ಆಗುತ್ತಿರುವುದರ ಕುರಿತು ತಿಳಿದುಕೊಂಡ ರಾಕಿ ಭಾಯ್ ಅವರು ಶೂಟಿಂಗ್​​ನಲ್ಲಿ ಬ್ಯುಸಿ ಇದ್ದ ಶಿವಣ್ಣ ಬಳಿ ಬಂದಿದ್ದಾರೆ. ಈ ವೇಳೆ ಶಿವಣ್ಣ ಕೂಡ ಯಶ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಶಿವಣ್ಣ ಅವರನ್ನು ಮೀಟ್ ಆಗುತ್ತಿದ್ದಂತೆ ಯಶ್ ಅವರು ಥ್ಯಾಂಕ್ಸ್ ಕೊಟ್ಟು ಪರಸ್ಪರ ಅಪ್ಪಿಕೊಂಡರು. ಇದೇ ವೇಳೆ ಟಾಕ್ಸಿಕ್ ಮೂವಿಗೆ ಡಾ. ಶಿವರಾಜ್ ಕುಮಾರ್ ಅವರು ಶುಭಾಶಯಗಳನ್ನು ಕೋರಿದ್ದಾರೆ. ರಾಕಿ ಭಾಯ್ ಯಶ್ ಹಾಗೂ ಶಿವರಾಜ್​ ಕುಮಾರ್ ಭೇಟಿ ಆಗಿರುವ ವಿಡಿಯೋ ಶೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಈ ಸ್ಟಾರ್​​ಗಳ ಫೋಟೋಗಳು ವೈರಲ್ ಆಗುತ್ತಿವೆ. ಅಲ್ಲದೇ ಇದಕ್ಕೆ ರಾಕಿ ಭಾಯ್ ಮೀಟ್ಸ್​ ದೇವ ಎನ್ನುವ ಟ್ಯಾಗ್​ ಲೈನ್ ಕೂಡ ಸಖತ್ ಫೇಮಸ್ ಆಗುತ್ತಿದೆ.

131ನೇ ಸಿನಿಮಾ ಶೂಟಿಂಗ್​ನಲ್ಲಿ ಯಶ್ ಅವರನ್ನು ನೋಡುತ್ತಿದ್ದಂತೆ ನಗುತ್ತ ಬಂದು ಶಿವರಾಜ್ ಕುಮಾರ್ ಥ್ಯಾಂಕ್ಸ್ ಕೊಟ್ಟರು. ಬಳಿಕ ಯಶ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡರು. ಅಲ್ಲದೇ ಶೂಟಿಂಗ್ ಸೆಟ್​​ನಲ್ಲಿದ್ದ ಇತರೆ ವ್ಯಕ್ತಿಗಳು ಥ್ಯಾಂಕ್ಸ್ ಕೊಟ್ಟರು. ಇದೇ ವೇಳೆ ಇಬ್ಬರು ಸ್ಟಾರ್ಸ್​ ಕುಳಿತು ಕೆಲವೊತ್ತು ಮಾತನಾಡಿದರು.

ಇನ್ನು ಯಶ್ ಅವರ ಸಿನಿಮಾ ಟಾಕ್ಸಿಕ್​ ಅನ್ನು ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣ ಅವರ 131ನೇ ಮೂವಿಯನ್ನು ಡೈರೆಕ್ಟರ್ ಕಾರ್ತಿಕ್ ಅದ್ವೈತ್ ಡೈರೆಕ್ಷನ್ ಮಾಡುತ್ತಿದ್ದಾರೆ. ಎರಡು ಸಿನಿಮಾಗಳು ಅದ್ಭುತವಾದ ಕಥೆ ಹೊಂದಿದ್ದರಿಂದ ದೊಡ್ಡ ದೊಡ್ಡ ಸೆಟ್​ ಹಾಕಿ ಶೂಟಿಂಗ್​ ಮಾಡುತ್ತಿದ್ದಾರೆ. ಈ ಮೊದಲಿನ ಸಿನಿಮಾಗಳಿಗಿಂತ ಇಬ್ಬರು ಸ್ಟಾರ್ಸ್ ವಿಭಿನ್ನವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button