Tuesday, January 27, 2026
26.7 C
Bengaluru
Google search engine
LIVE
ಮನೆ#Exclusive NewsTop Newsಮಗನ ಬರ್ತ್​ಡೇಗೆ! ಟಗರು ಬಂತು ಟಗರು ಹಾಡಿಗೆ ಸ್ಟೆಪ್ ಹಾಕಿದ ಯಶ್.. ವಿಡಿಯೋ ಇಲ್ಲದೆ..!

ಮಗನ ಬರ್ತ್​ಡೇಗೆ! ಟಗರು ಬಂತು ಟಗರು ಹಾಡಿಗೆ ಸ್ಟೆಪ್ ಹಾಕಿದ ಯಶ್.. ವಿಡಿಯೋ ಇಲ್ಲದೆ..!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್‌‌ ಆಗಾಗ ಸಖತ್‌ ಸುದ್ದಿಯಲ್ಲಿ ಇರುತ್ತಾರೆ. ಒಂದಲ್ಲ ಒಂದು ಪೊಸ್ಟ್‌‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಈ ಜೋಡಿ ಸಖತ್‌‌ ಸ್ಟೆಪ್ಸ್‌‌ ಹಾಕಿರುವ ವಿಡಿಯೋ ವೈರಲ್‌‌ ಆಗುತ್ತಿದೆ. ಮಗ ಯಥರ್ವ್​ನ  ಹುಟ್ಟುಹಬ್ಬದಲ್ಲಿ ದಂಪತಿ ಸಖತ್‌ ಎಂಜಾಯ್‌ ಮಾಡಿದ್ದಾರೆ. ನಿನ್ನೆ  ಯಥರ್ವ್ ಐದನೇ ವರ್ಷಕ್ಕೆ ಕಾಲಿಟ್ಟಿದ್ದು, ಮಗನಿಗೆ ರಾಧಿಕಾ ಪಂಡಿತ್ ಲವ್ಲಿ ವಿಶ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗನ ಕ್ಯೂಟ್ ವಿಡಿಯೋವನ್ನು ಕೂಡ ಶೇರ್ ಮಾಡಿದ್ದಾರೆ. ರಾಧಿಕಾ ವಿಡಿಯೋಗೆ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಸುರಿದು ಬಂದಿದೆ.

ಯಶ್‌ ಸಖತ್‌ ಸ್ಟೆಪ್ಸ್‌‌ ವಿಡಿಯೋ ವೈರಲ್‌

ಟಗರು ಬಂತು ಟಗರು ಹಾಡಿಗೆ ಸ್ಟೆಪ್  ಯಶ್‌ ಸಖತ್‌ ಸ್ಟೆಪ್ಸ್‌‌ ಹಾಕಿದ್ದಾರೆ. ರಾಧಿಕಾ ಕೂಡ ಮಗನನ್ನು ಎತ್ತಿಕೊಂಡು ಯಶ್‌ ಡ್ಯಾನ್ಸ್‌ಗೆ ಸಾಥ್‌‌ ಕೊಟ್ಟಿದ್ದಾರೆ. ಇದೀಗ ಈ ಜೋಡಿ ಕಂಡು ಫ್ಯಾನ್ಸ್‌ ಕ್ಯೂಟ್‌ ವಿಡಿಯೋ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ನಮ್ಮ ಟಗರು ಯಶ್‌ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

ರಾಧಿಕಾ ದಂಪತಿ ಮಕ್ಕಳ ಬರ್ತ್‌‌ಡೇ ಅನ್ನು ಪ್ರತೀ ವರ್ಷ ಅದ್ಧೂರಿಯಾಗಿ ಆಚರಿಸುತ್ತಾರೆ. ನಿನ್ನೆ ಮಗನ ಕ್ಯೂಟ್‌ ವಿಡಿಯೋ ಶೇರ್ ಮಾಡಿ . ಹ್ಯಾಪಿ ಬರ್ತ್​ ಡೇ ಮೈ ಸನ್​ಶೈನ್​ ಎಂದು ರಾಧಿಕಾ ಪಂಡಿತ್ ಬರೆದು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದರು.

ಸಿನಿಮಾಗಳಲ್ಲಿ ಬ್ಯುಸಿಯಾದ ಯಶ್‌!

ಯಶ್‌‌ ಸಿನಿಮಾಗಳಲ್ಲಿ ಬ್ಯುಸಿ ಆದರೆ, ರಾಧಿಕಾ ಅವರು  ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಮಕ್ಕಳ ಜೊತೆ ಆಗಾಗ ಟ್ರಿಪ್ ಮಾಡ್ತಾ ರಾಧಿಕಾ ಎಂಜಾಯ್ ಮಾಡ್ತಿರುತ್ತಾರೆ. ಮಕ್ಕಳ ಬರ್ತ್ ಡೇ ಹಾಗೂ ವೆಕೇಷನ್​ ಫೋಟೋಗಳನ್ನು ಹಂಚಿಕೊಳ್ತಿರುತ್ತಾರೆ. ರಾಧಿಕಾ ಪಂಡಿತ್​ ಬಣ್ಣದ ಲೋಕದಿಂದ ದೂರ ಸರಿದ್ರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್​ ಆಗಿದ್ದಾರೆ. ಇನ್ಸ್ಟಾದಲ್ಲಿ ರಾಧಿಕಾ ಅಪಾರ ಫ್ಯಾನ್​​ ಫಾಲೋವರ್ಸ್​ ಹೊಂದಿದ್ದಾರೆ.

ಟಾಕ್ಸಿಕ್‌ ಸಿನಿಮಾ ಬಿಡುಗಡೆ ಯಾವಾಗ?

ಸಿನಿಮಾ ವಿಚಾರಕ್ಕೆ ಬರೋದಾದರೆ ನಟ ಯಶ್​ ಟಾಕ್ಸಿಕ್ ಸಿನಿಮಾಗಾಗಿ ನಿರ್ದೇಶಕಿ ಗೀತಾ ಮೋಹನ್ ದಾಸ್ ಜೊತೆ ಕೈ ಜೋಡಿದ್ದು, ಟಾಕ್ಸಿಕ್ ಸಿನಿಮಾ ಈಗ ಅನೌನ್ಸ್ ಮಾಡಿದ ಡೇಟ್​ನಲ್ಲೇ ತೆರೆಗೆ ಬರೋದಿಲ್ಲ ಎಂದು ಯಶ್ ಹೇಳಿದ್ದಾರೆ.  ದಿ ಹಾಲಿವುಡ್ ರಿಪೋರ್ಟರ್‌ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ರಾಕಿಂಗ್ ಸ್ಟಾರ್ ಯಶ್​, ಇದು ಬಿಗ್ ಪ್ರಾಜೆಕ್ಟ್ ಆಗಿದ್ದು, ಸಿನಿಮಾ ನಾವು ಅಂದುಕೊಂಡ ದಿನಕ್ಕಿಂದ ಹೆಚ್ಚು ಟೈಮ್ ತೆಗೆದುಕೊಳ್ಳಲಿದೆ ಎಂದಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments