ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮತ್ತೊಂದು ಅದ್ಭುತ ಗೆಲುವು ಸಾಧಿಸಿದೆ. ಯುಪಿ ವಾರಿಯರ್ಸ್ ವಿರುದ್ಧ 23 ರನ್ಗಳ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಗಳ ಅಬ್ಬರ ಮುಗಿಲುಮುಟ್ಟಿತ್ತು.
ಆರ್ಸಿಬಿ ಇನ್ನಿಂಗ್ಸ್ ಸಂದರ್ಭದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬ್ಯಾಟರ್ ಎಲ್ಲಿಸ್ ಪೆರ್ರಿ ಹೊಡೆದ ಸಿಕ್ಟರ್ ಧಾಟಿಗೆ ಕಾರಿನ ಗಾಜು ಪುಡಿ ಪುಡಿ ಆಗಿದೆ.
ಆರ್ಸಿಬಿ ಇನ್ನಿಂಗ್ಸ್ನ 19ನೇ ಓವರ್ನ ಕೊನೆಯ ಎಸೆತವನ್ನು ಪೆರ್ರಿ ಲಾಂಗ್ ಆನ್ ಮೇಲೆ ಸಿಕ್ಸರ್ ಬಾರಿಸಿದ್ರು. ಅದು ನೇರವಾಗಿ ಡಿಸ್ಪ್ಲೇ ಬಾಕ್ಸ್ನಲ್ಲಿ ಇದ್ದ ಕಾರ್ನ ಕಿಟಕಿ ಗಾಜಿಗೆ ತಾಕಿತು. ಫಳ್ ಎಂದು ಕ್ಷಣಮಾತ್ರ ಗಾಜು ಪುಡಿ ಪುಡಿ ಆಗಿ ಚೆಂಡು ಕಾರಲ್ಲಿ ಸೇರಿಕೊಳ್ತು.
https://twitter.com/i/status/1764688501805818237
ಇದನ್ನು ನೋಡಿ ಎಲ್ಲರೂ ಶಾಕ್ ಆದರು. ಪೆರ್ರಿ ಕೂಡ ತಲೆ ಮೇಲೆ ಕೈ ಹೊತ್ತು ಅಯ್ಯೋ ಎಂಬಂತೆ ರಿಯಾಕ್ಷನ್ ನೀಡಿದರು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಅಂದ ಹಾಗೇ ಡಬ್ಲುಪಿಎಲ್ ಸೀಸನ್ ಪೂರ್ಣಗೊಂಡ ನಂತರ ಪ್ಲೇಯರ್ ಆಫ್ ದಿ ಸೀರೀಸ್ಗೆ ಈ ಕಾರನ್ನು ಗಿಫ್ಟ್ ಆಗಿ ನೀಡಲಾಗುತ್ತದೆ.