ವೈರಲ್ ನ್ಯೂಸ್ಸುದ್ದಿ

ಯಶ್ ಬಾಡಿಗಾರ್ಡ್ ಶ್ರೀನಿವಾಸ್ ಸಂಬಳ ಕೇಳಿದ್ರೆ ಬೆಚ್ಚಿಬೀಳ್ತೀರಾ!

ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗಾರ್ಡ್ ಶ್ರೀನಿವಾಸ್ ಅವರಿಗೆ ಸಿಗುತ್ತಿರುವ ಸಂಬಳದ ವಿಷಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ ಶ್ರೀನಿವಾಸ್ ಅವರಿಗೆ ತಿಂಗಳಿಗೆ ಬರೋಬ್ಬರಿ 10.5 ಲಕ್ಷ ರೂಪಾಯಿಗೂ ಅಧಿಕ ಸಂಭಾವನೆ ನೀಡಲಾಗುತ್ತಿದೆ. ಅಂದರೆ ಇವರ ವಾರ್ಷಿಕ ಆದಾಯ 1.25 ಕೋಟಿ ರೂಪಾಯಿಗಳಿಗೂ ಹೆಚ್ಚಿದೆ. ಈ ಭಾರಿ ಮೊತ್ತದ ಸ್ಯಾಲರಿಯಿಂದಾಗಿ ಶ್ರೀನಿವಾಸ್ ಈಗ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಡಿಗಾರ್ಡ್‌ಗಳ ಸಾಲಿಗೆ ಸೇರಿದ್ದಾರೆ.

ಸಾಮಾನ್ಯವಾಗಿ ಬಾಲಿವುಡ್‌ನ ಶಾರುಖ್ ಖಾನ್ ಅಥವಾ ಸಲ್ಮಾನ್ ಖಾನ್ ಅವರಂತಹ ಸ್ಟಾರ್ ನಟರು ಮಾತ್ರ ತಮ್ಮ ಸೆಕ್ಯೂರಿಟಿಗಾಗಿ ಇಷ್ಟು ದೊಡ್ಡ ಮೊತ್ತ ಖರ್ಚು ಮಾಡುತ್ತಾರೆ ಎಂಬ ಮಾತಿದೆ. ಆದರೆ ಈಗ ರಾಕಿ ಭಾಯ್ ಕೂಡ ತಮ್ಮ ಅಂಗರಕ್ಷಕನಿಗೆ ಅಷ್ಟೇ ಮಟ್ಟದ ಪ್ರಾಮುಖ್ಯತೆ ನೀಡುತ್ತಿರುವುದು ವಿಶೇಷ. ಯಶ್ ಎಲ್ಲೇ ಹೋದರೂ ಅವರ ನೆರಳಿನಂತೆ ಬೆನ್ನಿಗಿರುವ ಶ್ರೀನಿವಾಸ್, ಈಗ ಆಲ್ಮೋಸ್ಟ್ ಒಬ್ಬ ಕೋಟ್ಯಾಧಿಪತಿಯಾಗಿ ಗುರುತಿಸಿಕೊಂಡಿದ್ದಾರೆ.

ಸದ್ಯ ಯಶ್ ಅವರು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಹೊಂದಿರುವ ಯಶ್, ತಮ್ಮ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ. ಇದೇ ಕಾರಣಕ್ಕೆ ಅವರು ತಮ್ಮ ವೈಯಕ್ತಿಕ ಭದ್ರತೆಗಾಗಿ ಪ್ರತಿ ವರ್ಷ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button