Thursday, January 29, 2026
16.4 C
Bengaluru
Google search engine
LIVE
ಮನೆಜಿಲ್ಲೆಜಗತ್ತಿನ ಮೊದಲ ಓಂ ಆಕಾರದ ದೇಗುಲ: ಹೇಗಿದೆ ಗೊತ್ತಾ ವಿನ್ಯಾಸ ಮತ್ತು ನಿರ್ಮಾಣ?

ಜಗತ್ತಿನ ಮೊದಲ ಓಂ ಆಕಾರದ ದೇಗುಲ: ಹೇಗಿದೆ ಗೊತ್ತಾ ವಿನ್ಯಾಸ ಮತ್ತು ನಿರ್ಮಾಣ?

ರಾಜಸ್ಥಾನ : ಅದು ವಿಶ್ವದಲ್ಲೇ ಮೊದಲ ಓಂ ಆಕಾರದ ದೇವಾಲಯ. ರಾಮಮಂದಿರದ ಬೆನ್ನಲ್ಲೆ ಉದ್ಘಾಟನೆಗೆ ಸಿದ್ದವಾಗಿರುವ ಈ ದೇವಾಲಯ ಓಂ ಆಕಾರದಲ್ಲಿದೆ. ಈ ದೇವಾಲಯ ಲೋಕಾರ್ಪಣೆಗೊಂಡರೇ ಇಡೀ ವಿಶ್ವದಲ್ಲೇ ಓಂ ಆಕಾರದಲ್ಲಿರುವ ಮೊದಲ ದೇವಾಲಯ ಎಂಬ ಖ್ಯಾತಿಗೆ ಪಾತ್ರವಾಗುತ್ತದೆ. ಇನ್ನು ದೇಗುಲ ನಿರ್ಮಾಣವಾಗುತ್ತಿರವ ಆ ಗ್ರಾಮ ಪಾಪೂಲ್ಯಾರಿಟಿ ಪಡೆದುಕೊಳ್ಳಲಿದೆ.. ಇದೀಗ ರಾಮಮಂದಿರ ನಿರ್ಮಾಣವಾಗಿ ಜಗತ್ತನ್ನು ದೇಶದತ್ತ ನೋಡುವಂತೆ ಮಾಡಿದೆ. ಈ ದೇಗುಲವೂ ಸಮರ್ಪಣೆಯಾದ್ರೆ, ಮತ್ತೊಂದು ಸುತ್ತಿಗೆ ಭಾರತ ಧಾರ್ಮಿಕವಾಗಿ ಪ್ರಜ್ವಲಿಸಲಿದೆ.

ಭಾರತದ ದೇವಾಲಯಗಳು ಕೇವಲ ಕಟ್ಟಡವಾಗಿ ಉಳಿದಿಲ್ಲ, ಅವು ಸಂಸ್ಕೃತಿ-ಪರಂಪರೆಯ ಪ್ರತಿಬಿಂಬವಾಗಿದ್ದು, ಅದರ ಭವ್ಯತೆ ಜಗತ್ಪ್ರಸಿದ್ಧವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಯೋಧ್ಯೆಯ ಶ್ರೀರಾಮ ಮಂದಿರ. ಇದೇ ಕಾರಣದಿಂದ ಪ್ರಪಂಚದಾದ್ಯಂತ ಜನರು ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ಇದಲ್ಲದೆ, ಈ ದೇವಾಲಯಗಳ ಸುಂದರವಾದ ವಾಸ್ತುಶಿಲ್ಪವು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ.

ದೇಶದಲ್ಲಿ ಶೀಘ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಇಂತಹದೇ ಮತ್ತೊಂದು ದೇವಾಲಯ ನಿರ್ಮಾಣವಾಗುತ್ತಿದೆ. ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಓಂ’ ಆಕಾರದ ದೇವಾಲಯ ಇದಾಗಿದೆ. ಈ ಓಂ ಆಕಾರದ ದೇವಾಲಯವು ತುಂಬಾ ಸುಂದರವಾಗಿದೆ. ಅಲ್ಲದೆ, ಓಂ ಆಕಾರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದೇವಾಲಯ ಇದು. ಈ ದೇವಾಲಯವು ಭೂಮಿಯಿಂದ ಮಾತ್ರವಲ್ಲದೆ ಬಾಹ್ಯಾಕಾಶದಿಂದಲೂ ಬಹಳ ಸುಂದರವಾಗಿ ಕಾಣುತ್ತದೆ.

ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ಭವ್ಯವಾದ ಓಂ ಆಕಾರದ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಇದೇ ವರ್ಷ ಸಿದ್ಧವಾಗಲಿದೆ. 250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಶಿವಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮವು 10-19 ಫೆಬ್ರವರಿ 2024 ರ ನಡುವೆ ನಡೆಯಲಿದೆ.

ಈ ಶಿವನ ದೇವಾಲಯದಲ್ಲಿ 1008 ವಿವಿಧ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಓಂ ಆಕಾರದ ಈ ದೇವಾಲಯದ ಆವರಣದಲ್ಲಿ ಒಟ್ಟು 108 ಕೊಠಡಿಗಳಿವೆ. ಇದರ ಗೋಪುರವು 135 ಅಡಿ ಎತ್ತರವಾಗಿದ್ದು, ದೇವಾಲಯದ ಮಧ್ಯದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿಯಿದೆ. ಮೇಲ್ಭಾಗದಲ್ಲಿ ಮಹಾದೇವನ ಶಿವಲಿಂಗವನ್ನು ಸ್ಥಾಪಿಸಲಾಗಿದೆ.

1995ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನಡೆದಿದ್ದು, ಕಳೆದ 25 ವರ್ಷಗಳಿಂದ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಓಂ ಆಶ್ರಮ ಜದನ್ ಪಾಲಿಯನ್ನು ನಾಗರ ಶೈಲಿಯ ವಾಸ್ತುಶಿಲ್ಪ ಮತ್ತು ಉತ್ತರ ಭಾರತದ ವಾಸ್ತುಶಿಲ್ಪದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ಓಂನ ಆಕಾರವು ಸುಮಾರು ಅರ್ಧ ಕಿಲೋಮೀಟರ್ ತ್ರಿಜ್ಯದಲ್ಲಿ ಹರಡಿದೆ. ಭವ್ಯವಾದ ದೇಗುಲ ಲೋಕಾರ್ಪಣೆ ಮಾಡಲು ಅಂತಿಮ ಸಿದ್ದತೆ ನಡೆಯುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments