#Exclusive NewsTop Newsವಿಶೇಷ

ವಿಶ್ವ ಸಾಮಾಜಿಕ ನ್ಯಾಯ ದಿನ; ಅಸಮಾನತೆ ಮುಕ್ತ ಸಮಾಜದತ್ತ ಒಂದು ಹೆಜ್ಜೆ

ಸಮಾಜದಲ್ಲಿ ಬಡತನ, ಲಿಂಗ ಅಸಮಾನತೆ, ದೈಹಿಕ ತಾರತಮ್ಯ, ಅನಕ್ಷರತೆ ಮತ್ತು ಧಾರ್ಮಿಕ ವೈಷಮ್ಯಗಳನ್ನು ತೊಡೆದುಹಾಕಿ ಸಮಗ್ರ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 20 ರಂದು ‘ವಿಶ್ವ ಸಾಮಾಜಿಕ ನ್ಯಾಯ ದಿನ’ವನ್ನುಆಚರಿಸಲಾಗುತ್ತದೆ.

ಒಂದು ದೇಶದ ಅಭಿವೃದ್ಧಿಯು ಅಲ್ಲಿನ ಸಮಾಜದಲ್ಲಿರುವ ಐಕ್ಯತೆ, ಸಾಮರಸ್ಯ ಮತ್ತು ಪ್ರತಿಯೊಬ್ಬರಿಗೂ ಸಿಗುವ ಮೂಲಭೂತ ಹಕ್ಕುಗಳ ನ್ಯಾಯದ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ದಿನವು ಅತ್ಯಂತ ಮಹತ್ವದ್ದಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ನವೆಂಬರ್‌ನಲ್ಲಿ ಈ ದಿನವನ್ನು ಘೋಷಿಸಲಾಯಿತಾದರೂ, 2009ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಆಚರಣೆಗೆ ತರಲಾಯಿತು. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಪ್ರಯತ್ನಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತೇಜನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಎಲ್ಲರಿಗೂ ಯೋಗ್ಯವಾದ ಉದ್ಯೋಗಾವಕಾಶ, ಲಿಂಗ ಸಮಾನತೆ ಮತ್ತು ಸಾರ್ವತ್ರಿಕ ಸಾಮಾಜಿಕ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರತಿ ವರ್ಷ ಈ ದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರಿಗೂ ನ್ಯಾಯ ದೊರಕುವ ಸುಂದರ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತದೆ.

Comments (0)

Your email address will not be published. Required fields are marked *

Back to top button