ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ ಪಾಲಿಕೆ ಬಾಕಿ ಉಳಿಸಿಕೊಂಡಿರೋದು ಇದೀಗ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿಬಿಟ್ಟಿದೆ. ಕಳೆದ 2 ವರ್ಷದಿಂದ ಬರೋಬ್ಬರಿ 1,600 ಕೋಟಿ ರೂ. ಹಣವನ್ನ ಪಾಲಿಕೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿರೋ ಗುತ್ತಿಗೆದಾರರು, ಶೇ.75ರಷ್ಟು ಕಾಮಗಾರಿ ಬಿಲ್ ಮಾತ್ರ ಪಾಲಿಕೆ ಪಾವತಿಸಿದ್ದು, ಉಳಿದ ಶೇಕಡಾ 25ರಷ್ಟು ಬಿಲ್ ಪಾವತಿಗೆ ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.
ಸದ್ಯ ಬಾಕಿ ಬಿಲ್ ಬಿಡುಗಡೆಗೆ ಡಿಸಿಎಂ ಡಿಕೆ ಶಿವಕುಮಾರ್ಗೂ ಪತ್ರ ಬರೆದು ಸುಸ್ತಾದ ಬಿಬಿಎಂಪಿಯ ಗುತ್ತಿಗೆದಾರರು, ಇದೀಗ ಇಂದಿನಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನ ಬಂದ್ ಮಾಡಿ ಪ್ರತಿಭಟಿಸೋಕೆ ಸಜ್ಜಾಗಿದ್ದಾರೆ. ಪಾಲಿಕೆಯಿಂದ ಕೈಗೊಂಡಿರುವ ಎಲ್ಲಾ ಕಾಮಗಾರಿಗೆ ಬ್ರೇಕ್ ಹಾಕಲು ಸಜ್ಜಾಗಿರೋ ಗುತ್ತಿಗೆದಾರರು, ಬಾಕಿ ಬಿಲ್ ಕ್ಲಿಯರ್ ಆಗೋ ತನಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸೋಕೆ ಸಿದ್ಧತೆ ನಡೆಸಿದ್ದಾರೆ.
ಇನ್ನು ಪಾಲಿಕೆ ಗುತ್ತಿಗೆದಾರರ ಈ ನಿರ್ಧಾರದಿಂದ ಇಂದಿನಿಂದ ಬೆಂಗಳೂರಿನಲ್ಲಿ ಪಾಲಿಕೆ ನಡೆಸ್ತಿರೋ ಎಲ್ಲಾ ಕಾಮಗಾರಿಗಳು ಸ್ಥಗಿತವಾಗಲಿದ್ದು, ಇದರಿಂದ ಸಾರ್ವಜನಿಕರಿಗೆ ಅಡಚಣೆ ಎದುರಾಗೋ ಸಾಧ್ಯತೆ ದಟ್ಟವಾಗಿದೆ. ಸದ್ಯ ಬಿಬಿಎಂಪಿಯ ಗುತ್ತಿಗೆದಾರರ ಸಿಟ್ಟಿಗೆ ಬಂದ್ ಆಗ್ತಿರೋ ಕಾಮಗಾರಿಗಳು ಯಾವ್ಯಾವು ಎಂದರೆ.
2021 ರಿಂದ ಮಾಡಲಾದ ಕಾಮಗಾರಿಗಳಿಗೆ ಈಗಾಗಲೇ ಶೇ 75 ರಷ್ಟು ಹಣ ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ 25 ರಷ್ಟು ಹಣ ಬಿಡುಗಡೆಗೆ ವಿಳಂಬ ಮಾಡಲಾಗ್ತಿದೆ. ಕೂಡಲೇ ಹಣ ಬಿಡುಗಡೆ ಮಾಡಬೇಕು. ಇಲ್ಲವಾದ್ರೆ ನಮ್ಮ ಹೋರಾಟ ಮುಂದುವರಿಯುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.
- ರಸ್ತೆ ಕಾಮಗಾರಿ
- ಮೂಲಭೂತ ಸೌಕರ್ಯ ವಿಭಾಗದ ಕಾಮಗಾರಿಗಳು
- ವಾರ್ಡ್ ಮಟ್ಟದ ನಿರ್ವಹಣಾ ಕಾಮಗಾರಿಗಳು
- ಬೃಹತ್ ನೀರುಗಾಲುವೆ
- ವೈಟ್ ಟಾಪಿಂಗ್ ಕಾಮಗಾರಿ
- ಬಿಬಿಎಂಪಿ ಎಲೆಕ್ಟ್ರಿಕ್ ವಿಭಾಗದ ಕಾಮಗಾರಿಗಳು