ಬೆಳಗಾವಿ : ಮಗುವಿಗೆ ಅಪಸ್ಮಾರ (ಪಿಡ್ಸ್) ಬರುತ್ತೆ ಎಂದು ಹೆತ್ತಿರುವ ಎರಡು ತಿಂಗಳ ಹೆಣ್ಣು ಹಸುಗೂಸನ್ನು ತಾಯಿ ಕೆರೆಗೆ ಎಸೆದಿರುವ ಮತ್ತೊಂದು ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ಕಣಬರಗಿ ಗ್ರಾಮದಲ್ಲಿ ನಡೆದಿದೆ. ತಾಯಿ ಮಗುವನ್ನು ಕೆರೆಗೆ ಎಸೆಯುವುದನ್ನ ನೋಡಿದ ದನ, ಕರು ತೊಳೆಯುತ್ತಿದ್ದ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ.
ಕಣಬರಗಿ ಗ್ರಾಮದ ನಿವಾಸಿ ರಾಬರ್ಟ ಕರವಿನಕೊಪ್ಪಿ ಎಂಬುವವರ ಪತ್ನಿ ಶಾಂತಾ(35) ಎಂಬುವವರು ಈ ಕೃತ್ಯವೆಸಗಿದ್ದಾರೆ. ಮಗುವನ್ನು ಕೆರೆಗೆ ಎಸೆದು ಓಡಿ ಹೋಗುತ್ತಿದ್ದ ತಾಯಿಯನ್ನು ತಡೆದು ಸ್ಥಳೀಯರು ಬುದ್ಧಿ ಹೇಳಿ ಮಗುವನ್ನು ರಕ್ಷಿಸಿ ಅವಳ ಕೈಗೆ ನೀಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಶಾಂತಿ ಗೃಹಿಣಿಯಾಗಿದ್ದಳು. ಇತ್ತ ಗಂಡ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕೆಲಸಕ್ಕೆ ಹೋಗಿದ್ದಾಗ ಮಗುವನ್ನ ಎತ್ತಿಕೊಂಡು ಕೆರೆ ಬಳಿ ಬಂದಿದ್ದಾರೆ. ಹೀಗೆ ಕೆರೆಗೆ ಬಂದ ಕೆಲ ಹೊತ್ತು ಅನುಮಾನಾಸ್ಪದವಾಗಿ ಕೆರೆ ಬಳಿ ಓಡಾಡಿದ್ದಾರೆ. ಬಳಿಕ ಮಗುವನ್ನು ಕೆರೆಗ ಎಸೆದು ತಾಯಿ ಓಡತೋಡಗಿದ್ದಾರೆ ಎನ್ನಲಾಗಿದೆ.
ಇದನ್ನು ಗಮನಿಸಿದ ಕನ್ನಯ್ಯಾ ಜಂಬಾಳೆ ಓಡೋಡಿ ಹೋಗಿದ್ದಾರೆ. ಇದೇ ಕೆರೆಯಲ್ಲಿ ದನ ತೊಳೆಯುತ್ತಿದ್ದ ಜ್ಯೋತಿಬಾ ಎಂಬ ಯುವಕ ಕೂಡಲೇ ಕೆರೆಗೆ ಹಾರಿ ಮಗುವನ್ನ ರಕ್ಷಣೆ ಮಾಡಿದ್ದಾರೆ.
ತಾಯಿ ಅರೆಸ್ಟ್
ಇನ್ನೂ ಕೆರೆಗೆ ಮಗುವನ್ನ ಎಸೆದು ಶಾಂತಿ ಓಡುತ್ತಿದ್ದಂತೆ ಹಿಂಬಾಲಿಸಿದ ಸ್ಥಳೀಯರು ಕೂಡಲೇ ಆಕೆಯನ್ನ ಹಿಡಿದು ಕೆರೆ ಕಡೆಗೆ ಕರೆದುಕೊಂಡು ಬಂದಿದ್ದಾರೆ. ರಕ್ಷಣೆ ಮಾಡಿದ ಮಗುವನ್ನ ಆಕೆ ಕೈಗೆ ಕೊಟ್ಟು ಬುದ್ದಿವಾದ ಹೇಳಿದ್ದಾರೆ. ಆ್ಯಂಬುಲೆನ್ಸ್ ಕರೆಸಿ ಮಗುವನ್ನ ನಗರದಲ್ಲಿರುವ ಚಿಕ್ಕ ಮಕ್ಕಳ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಳಿಕ ಆಸ್ಪತ್ರೆಗೆ ಹೋಗಿ ಮಗುವಿನ ಆರೋಗ್ಯದ ಕುರಿತು ವಿಚಾರಿಸಿ ಅಲ್ಲೇ ಇದ್ದ ತಾಯಿ ಶಾಂತಿಯನ್ನ ಬಂಧಿಸಿದ್ದಾರೆ.
ಇನ್ನೂ ಮಗುವನ್ನ ಕೆರೆಗೆ ಯಾಕೆ ಎಸೆದಿದ್ದು ಅಂತಾ ವಿಚಾರಣೆ ನಡೆಸಿದಾಗ ಮಗನಿಗೆ ನಿರಂತರವಾಗಿ ಪಿಡ್ಸ್ ಬರ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು. ಇನ್ನೂ ಒಂದು ಮೊದಲ ಮಗನ ಎರಡನೇ ವರ್ಷದ ಹುಟ್ಟುಹಬ್ಬ ಕೂಡ ಇಂದೇ ಇದ್ದು ಇದೇ ದಿನ ಎರಡನೇ ಮಗನನ್ನ ಕೊಲ್ಲಲು ಯತ್ನಿಸಿದ್ದಾಗಿ ಹೇಳಿದ್ದಾರೆ.