ಕೊಪ್ಪಳ: ಹಣ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆಸಿ ಸಾಮೂಹಿಕ ಅತ್ಯಾಚಾರ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ..
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾದ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಗಜೇಂದ್ರಗಡ ಮೂಲದ ಲಕ್ಷ್ಮಣ, ಬಸವರಾಜ್, ಯಲಬುರ್ಗಾ ತಾಲೂಕಿನ ಮುತ್ತುರಾಜ್ ಹಾಗೂ ಶಶಿಕುಮಾರ್‌ನನ್ನು ಯಲಬುರ್ಗಾ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 16 ರ ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತೆಗೆ ಪರಿಚಯವಿದ್ದ ಲಕ್ಷ್ಮಣ ಆಕೆಗೆ 5,000 ಹಣ ಕೊಡಬೇಕಾಗಿತ್ತು. ಹಣ ಕೊಡುತ್ತೇನೆಂದು ಮಹಿಳೆಯನ್ನು ಕುಷ್ಟಗಿಗೆ ಕರೆಸಿಕೊಂಡಿದ್ದ. ಲಕ್ಷ್ಮಣ್, ಆರು ತಿಂಗಳಿನಿಂದ ಮಹಿಳೆಗೆ ಪರಿಚಿತನಾಗಿದ್ದು ರೂ. 5,000 ರೂ. ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಆ ಹಣವನ್ನು ಮರುಪಾವತಿಸುವುದಾಗಿ ಹೇಳಿ ಕುಷ್ಟಗಿಗೆ ಕರೆಸಿಕೊಂಡಿದ್ದ.
ಅಲ್ಲಿಂದ ಮಹಿಳೆಯನ್ನು ಇತರ ಮೂವರು ಆರೋಪಿಗಳು ಸೇರಿಕೊಂಡು ಬೈಕಿನಲ್ಲಿ ಮಾದ್ಲೂರು ಗ್ರಾಮಕ್ಕೆ ಕರೆದೊಯ್ದು ಜ್ಯೂಸ್ ಎಂದು ಮತ್ತು ಬರುವ ಪಾನೀಯ ಕುಡಿಸಿದ್ದಾರೆ. ಬಳಿಕ ಪಾಳುಬಿದ್ದ ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೊಪ್ಪಳ ಡಿಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


