Thursday, January 29, 2026
26.8 C
Bengaluru
Google search engine
LIVE
ಮನೆದೇಶ/ವಿದೇಶದೆಹಲಿಯಲ್ಲಿ ಪತಿಯಿಂದಲೇ ಮಹಿಳಾ ಕಮಾಂಡೋ ಹತ್ಯೆ

ದೆಹಲಿಯಲ್ಲಿ ಪತಿಯಿಂದಲೇ ಮಹಿಳಾ ಕಮಾಂಡೋ ಹತ್ಯೆ

ದೆಹಲಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಆಕೆಯ ಪತಿಯೇ ಲೋಹದ ಡಂಬಲ್‌ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

ಕೊನೆಯ ಕ್ಷಣಗಳಲ್ಲಿ ಮಹಿಳೆ ತನ್ನ ಸಹೋದರನಿಗೆ ಕರೆ ಮಾಡಿ ಸಹಾಯ ಕೇಳಿದ್ದು, ಆ ವೇಳೆ ಆಕೆಯ ಕಿರುಚಾಟ ಮಾತ್ರ ಕೇಳಿಬಂದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಮೃತಳನ್ನು ಕಾಜಲ್ ಎಂದು ಗುರುತಿಸಲಾಗಿದ್ದು, ಅವರು ಸ್ವ್ಯಾಟ್ (SWAT) ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿದ್ದ 27 ವರ್ಷದ ಪೊಲೀಸ್ ಅಧಿಕಾರಿ. ಜನವರಿ 22ರಂದು ಗಂಭೀರವಾಗಿ ಗಾಯಗೊಂಡಿದ್ದ ಕಾಜಲ್, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ನೈಋತ್ಯ ದೆಹಲಿಯ ದ್ವಾರಕಾ ಮೋರ್‌ನಲ್ಲಿರುವ ನಿವಾಸದಲ್ಲಿ ಕಾಜಲ್ ಅವರ ಪತಿ ಅಂಕುರ್ ಚೌಧರಿ (28) ಲೋಹದ ಡಂಬಲ್‌ನಿಂದ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಆಕೆಯ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಪುನಃ ಪುನಃ ಹೊಡೆದಿದ್ದಾನೆ ಎನ್ನಲಾಗಿದೆ. ಕೌಟುಂಬಿಕ ಕಲಹ ಮತ್ತು ವರದಕ್ಷಿಣೆಯೇ ಹತ್ಯೆಗೆ ಕಾರಣ ಎನ್ನಲಾಗಿದೆ.. ನಿಖಿಲ್ ನೀಡಿದ ಹೇಳಿಕೆಯಂತೆ, ಕಾಜಲ್ ಸ್ವತಃ ಫೋನ್ ತೆಗೆದುಕೊಂಡು ಮಾತನಾಡಲು ಯತ್ನಿಸಿದಾಗ, ಅಂಕುರ್ ಆಕೆಯಿಂದ ಫೋನ್ ಕಸಿದುಕೊಂಡಿದ್ದಾನೆ.ಸುಮಾರು ಐದು ನಿಮಿಷಗಳ ಬಳಿಕ, ಅಂಕುರ್ ಮತ್ತೆ ಕರೆ ಮಾಡಿ ಕಾಜಲ್ ಮೃತಪಟ್ಟಿರುವುದಾಗಿ ಹೇಳಿ ಶವವನ್ನು ತೆಗೆದುಕೊಂಡು ಹೋಗುವಂತೆ ಕೇಳಿದ್ದಾನೆ. ಇದರಿಂದ ಆತಂಕಗೊಂಡ ನಿಖಿಲ್ ತಕ್ಷಣವೇ ಮಧ್ಯರಾತ್ರಿ ದೆಹಲಿಗೆ ಧಾವಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಕಾಜಲ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಅಲ್ಲಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದಿದ್ದಾರೆ , ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments