Top Newsರಾಜ್ಯಸುದ್ದಿ

ರಾಜ್ಯಪಾಲರು ಸೂಚಿಸಿದರೆ ಮೈಕ್ರೋ ಫೈನಾನ್ಸ್ ಬಿಲ್‌ನಲ್ಲಿ ಬದಲಾವಣೆ ಮಾಡ್ತೀವಿ – ಪರಮೇಶ್ವರ್

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟಲು ಹೊರಟಿರುವ ಸುಗ್ರೀವಾಜ್ಞೆಯಲ್ಲಿ ರಾಜ್ಯಪಾಲರು ಏನಾದರೂ ಬದಲಾವಣೆಗೆ ಸೂಚನೆ ಕೊಟ್ಟರೆ ಅದನ್ನು ಬದಲಾವಣೆ ಮಾಡೋದಾಗಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರಿಗೆ ಈಗಾಗಲೇ ಕರಡು ಕಳಿಸಲಾಗಿದೆ. ಇವತ್ತು ಸಹಿ ಹಾಕಬಹುದು ಎಂಬ ನಿರೀಕ್ಷೆ ಇದೆ. ರಾಜ್ಯಪಾಲರು ಅವರ ಕಾನೂನು ತಜ್ಞರ ಜೊತೆ ಮಾತನಾಡಿ ಅಂತಿಮವಾಗಿ ಸಹಿ ಹಾಕಬಹುದು. ಅವರು ಸಹಿ ಹಾಕಿದರೆ ಇವತ್ತು ಸುಗ್ರೀವಾಜ್ಞೆ ಜಾರಿಯಾಗಬಹುದು ಎಂದರು.

ಬಿಲ್‌ನಲ್ಲಿ ಕೆಲ ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬದಲಾವಣೆಗೆ ರಾಜ್ಯಪಾಲರು ಸೂಚನೆ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಸರ್ಕಾರಕ್ಕೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಒಂದು ವೇಳೆ ರಾಜ್ಯಪಾಲರು ಕೆಲ ಅಂಶಗಳ ಬದಲಾವಣೆಗೆ ಸೂಚನೆ ಕೊಟ್ಟರೆ ಅದನ್ನು ಬದಲಾವಣೆ ಮಾಡಿ ಕಳುಹಿಸುತ್ತೇವೆ ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button