ಸಿನಿಮಾ : ಮೊನ್ನೆಯಿಂದಲೇ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಡಾಲಿ ಧನಂಜಯ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಅಗಿದೆ. ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸ್ತಾರೆ ಅನ್ನೋದು ಬಲವಾಗಿಯೇ ಕೇಳಿ ಬಂದಿತ್ತು. ಸಿ.ಎಂ.ಸಿದ್ದಾರಾಮಯ್ಯ ಅವರು ಮೊನ್ನೆ ಬಜೆಟ್‌ನಲ್ಲಿ ಡಾಲಿ ಧನಂಜಯ್ ಬರೆದ ಹಾಡೊಂದನ್ನ ಬಜೆಟ್ ಮುಂಚೆ ಹೇಳಿದ್ದರು. ಹಾಗಾಗಿಯೇ ಎಲ್ಲವೂ ಕನೆಕ್ಟ್ ಆಗಿತ್ತು. ಅದು ಎಷ್ಟರಮಟ್ಟಿಗೆ ಅಂದ್ರೆ ಇನ್ನೇನು ಡಾಲಿ ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದೇ ಬರ್ತಾರೆ ಅನ್ನೋದು ಸುದ್ದಿಯಾಗಿತ್ತು . ಆದರೆ ಡಾಲಿ ಧನಂಜಯ್ ಅದಕ್ಕೆಲ್ಲ ಇದೀಗ ತೆರೆ ಎಳೆದಿದ್ದಾರೆ. ನಾನು ಸಿನಿಮಾ ಮಾಡ್ಬೇಕು ಅಂತ ಕನಸು ಕಟ್ಟಿಕೊಂಡು ಬಂದಿದ್ದೇನೆ. ಸಿನಿಮಾನೇ ಮಾಡುತ್ತೇನೆ ಅಂತಲೇ ಡಾಲಿ ಧನಂಜಯ್ ಹೇಳಿದ್ದಾರೆ.
ಡಾಲಿ ಧನಂಜಯ್ ಸಿನಿಮಾ ಬಿಟ್ಟು ಎಲ್ಲೂ ಹೋಗಲ್ಲ!
ಡಾಲಿ ಧನಂಜಯ್ ಸಿನಿಮಾ ಮಾಡ್ತಾರೆ. ಸಿನಿಮಾ ಬಿಟ್ಟು ಎಲ್ಲೂ ಹೋಗೋದಿಲ್ಲ. ಸಿನಿಮಾ ಹೊರತಾಗಿ ಸದ್ಯಕ್ಕೆ ಡಾಲಿ ಏನೂ ಯೋಚನೆ ಮಾಡ್ತಿಲ್ಲ. ಇದನ್ನ ಸ್ವತಃ ಡಾಲಿ ಧನಂಜಯ್ ಅವರು ಮಾಧ್ಯಮಗಳಿಗೆ ರಿಯ್ಯಾಕ್ಟ್ ಮಾಡಿದ್ದಾರೆ. ಈ ಮೂಲಕ ಮೊನ್ನೆಯಿಂದಲೂ ಇದ್ದ ರಾಜಕೀಯ ಎಂಟ್ರಿಯ ಸುದ್ದಿಗೆ ತೆರೆ ಎಳೆದಿದ್ದಾರೆ. ಸಿನಿಮಾ ಕನಸು ಕಟ್ಟಿಕೊಂಡು ಬಂದಿದ್ದೇನೆ. ಇನ್ನು ಸಾಕಷ್ಟು ಸಿನಿಮಾ ಮಾಡಬೇಕಿದೆ. ಸಿನಿಮಾನೇ ಮಾಡುತ್ತೇನೆ. ಸಿನಿಮಾ ಬಿಟ್ಟು ಬೇರೆ ಏನೂ ಯೋಚನೆ ಮಾಡೋದಿಲ್ಲ ಅಂತಲೇ ಡಾಲಿ ಧನಂಜಯ್ ಹೇಳಿಕೊಂಡಿದ್ದಾರೆ.
ರಾಜಕೀಯ ಎಂಟ್ರಿ ಬಗ್ಗೆ ನನಗೆ ಏನಂದ್ರೆ ಏನೂ ಗೊತ್ತಿಲ್ಲ. ಸಿನಿಮಾ ಕೆಲಸಕ್ಕಾಗಿಯೇ ನಾನು ಹೈದ್ರಾಬಾದ್‌ನಲ್ಲಿಯೇ ಇದ್ದೆ. ಆದರೆ ಅಲ್ಲಿಂದ ಬರೋದ್ರ ಒಳಗೆ ನಾನು ರಾಜಕೀಯಕ್ಕೂ ಎಂಟ್ರಿ ಆಗಿದ್ದೇನೆ.ನನಗೆ ಟಿಕೆಟ್ ಕೂಡ ಕೊಡಿಸಿಬಿಟ್ಟೀದ್ದೀರಾ? ಇದೆಲ್ಲ ಮಾಧ್ಯಮದವರೇ ಮಾಡಿರೋದು.
ಹಾಗಾಗಿಯೇ ಇದರ ಬಗ್ಗೆ ನಾನು ಏನೂ ಹೇಳೋದು. ಅದರ ಬಗ್ಗೆ ನೀವೇ ಹೇಳ್ಬೇಕು ಅಂತಲೇ ಡಾಲಿ ಧನಂಜಯ್ ಹೇಳಿದ್ದಾರೆ. ಸಿನಿಮ ಹೊರತಾಗಿ ನಾನು ಬೇರೆ ಏನೂ ಮಾಡೋದಿಲ್ಲ.