Top News

ಮೆಟ್ರೋ ಹೊಸ ಮಾರ್ಗಗಳ ನಿಲ್ದಾಣಗಳಲ್ಲಿ ಸಿಗಲಿದೆ ವೈಫೈ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್​. ನಮ್ಮ ಮೆಟ್ರೋದ ಸಂಚಾರ ಮಾರ್ಗಗಳಲ್ಲಿ ನೆಟ್​ವರ್ಕ್​ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ವೈಫೈ ಸೌಲಭ್ಯ ನೀಡಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಮೆಟ್ರೋ ಮಾರ್ಗಗಳಲ್ಲಿ ಉಂಟಾಗುವ ನೆಟ್​ವರ್ಕ್​ ಸಮಸ್ಯೆ ಬಗೆಹರಿಸಲು ಬಿಎಂಆರ್​ಸಿಎಲ್​​ ಮೆಟ್ರೋ ನಿಲ್ದಾಣಗಳಲ್ಲಿ ಐಬಿಎಸ್- ಬಿಟಿಎಸ್,ಸೆಲ್ಯುಲರ್ ಟವರ್ ಸ್ಥಾಪನೆ ಮಾಡಿ ಎಸಿಇಎಸ್ ನಿರ್ವಹಣೆ ಮಾಡುವ ಮೂಲಕ 4G,5G ಸೇವೆ ಒದಗಿಸಲು ಮುಂದಾಗಿದೆ.

ನಮ್ಮ ಮೆಟ್ರೋ ಎರಡನೇ ಹಂತದ ಸುರಂಗ ಮಾರ್ಗ ಹಾಗೂ ಎತ್ತರದ ಸ್ಥಳಗಳಲ್ಲಿ ನೆಟ್​ವರ್ಕ್​ ಸಮಸ್ಯೆ ಬಗೆಹರಿಸಲು ಹಾಗೂ ಸುಗಮವಾಗಿ ಮೊಬೈಲ್​ ಸಂಪರ್ಕ ಕಲ್ಪಿಸುವ ಸಲುವಾಗಿ ಅಡ್ವಾನ್‌ಸ್ಡ್ ಕಮ್ಯೂನಿಕೇಶನ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ (ACES) ಕಂಪನಿಯೊಂದಿಗೆ ಬಿಎಂಆರ್​ಸಿಎಲ್ (BMRCL)​ ಒಪ್ಪಂದ ಮಾಡಿಕೊಂಡಿದೆ.

ಈ ಒಡಂಬಡಿಕೆಯಂತೆ ಆರ್ ವಿ ರಸ್ತೆ – ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ (ರೀಚ್​5) ಮತ್ತು ಗೊಟ್ಟಿಗೆರೆ- ನಾಗಸಂದ್ರ ಸಂಪರ್ಕಿಸುವ ಗುಲಾಬಿ ಮಾರ್ಗಗಳ(ರೀಚ್​6) ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಸಿಗಲಿದೆ. ಐಬಿಎಸ್- ಬಿಟಿಎಸ್, ಸೆಲ್ಯುಲರ್ ಟವರ್ ಸ್ಥಾಪನೆ ಮಾಡಿ ಎಸಿಇಎಸ್ ನಿರ್ವಹಣೆ ಮಾಡಲಿದೆ. ಈ ಮೂಲಕ ಮೆಟ್ರೋ ಮಾರ್ಗದ ಅಲ್ಲಲ್ಲಿ ಉಂಟಾಗುತ್ತಿರುವ ನೆಟ್​ವರ್ಕ್​  ಸಮಸ್ಯೆಗಳಿಗೆ ಮುಕ್ತಿ ನೀಡಲು ನಿರ್ಧಾರ ಕೈಗೊಂಡಿದೆ.

Comments (0)

Your email address will not be published. Required fields are marked *

Back to top button