ತುಮಕೂರು : ಮಾಜಿ ಸಚಿವ ಕೆ. ಎನ್. ರಾಜಣ್ಣ ಬಿಜೆಪಿಗೆ ಹೋಗೋದು ನೂರಕ್ಕೆ ನೂರು ಸತ್ಯ ಎಂದು ಬಾಂಬ್ ಸಿಡಿಸಿದ ಮಾಗಡಿ ಶಾಸಕ ಬಾಲಕೃಷ್ಣಗೆ ರಾಜಣ್ಣ ಟಾಂಗ್ ಕೊಟ್ಟಿದ್ದಾರೆ.
ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಯಾವನು ಹೇಳಿದ್ದು, ಬಾಲಕೃಷ್ಣ ಹೇಳೋದು ಹೇಳಿಕೊಳ್ಳಲಿ. ಅವರು ಬೇಕಾದರೆ ಬ್ರೈನ್ ಮ್ಯಾಪಿಂಗ್ ಮಾಡಿಕೊಳ್ಳಲಿ ಎಂದು ಬಾಲಕೃಷ್ಣ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಯಾಕೆ ಬಿಜೆಪಿ ಸೇರಲಿ, ನಾನ್ಯಾಕೆ ಪಾರ್ಟಿ ಬಿಡಲಿ ಎಂದು ಕೆ.ಎನ್. ರಾಜಣ್ಣ ಪ್ರಶ್ನಿಸಿದ್ದಾರೆ.
ಮಂತ್ರಿ ಸ್ಥಾನ ಹೋದರು, ನಿಮ್ಮ ಪ್ರೀತಿ ವಿಶ್ವಾಸ ಕಡಿಮೆಯಾಗಿಲ್ಲ . ನಿಮ್ಮ ಕೆಲಸ ಮಾಡಲು ಸಚಿವ ಸ್ಥಾನ ಇರಬೇಕು ಅಂತೇನಿಲ್ಲ. 35,500 ಮತಗಳ ಲೀಡ್ ನಲ್ಲಿ ಗೆದ್ದಿದ್ದೇನೆ. ಈಗ ಚುನಾವಣೆ ಆದ್ರೂ ಮತ್ತೆ ಗೆಲ್ತೀನಿ. ನಾನು ಭ್ರಷ್ಟಾಚಾರ ಮಾಡಿಲ್ಲ, ಅದಕ್ಷನಾಗಿ ಇಲಾಖೆ ನಡೆಸಿಲ್ಲ. ಸಹಕಾರಿ ಸಂಘಗಳಿಗೂ ರಿಸರ್ವೇಷನ್ ಕಾಯ್ದೆ ನಾನು ಮಾಡಿದ್ದೇನೆ. ಮೀಸಲಾತಿ ಮಂಜೂರಾತಿಯಾಗಿದೆ, ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ. ನಾನು ಯಾಕೆ ಬಿಜೆಪಿ ಸೇರಲಿ ಎಂದು ಪ್ರಶ್ನಿಸಿದ್ದಾರೆ. ನಾನ್ಯಾಕೆ ಪಾರ್ಟಿ ಬಿಡಲಿ. ನಾನು ಎಲ್ಲೇ, ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ, ಚುನಾವಣೆಯಲ್ಲಿ ಗೆಲ್ತೀನಿ. ಪಕ್ಷೇತರನಾಗಿ ಸ್ಪರ್ಧಿಸಿದ್ರು ಗೆಲ್ತೀನಿ. ಕಾಂಗ್ರೆಸ್ ತೊರೆಯಲ್ಲ, ರಾಹುಲ್ ಗಾಂಧಿಯ ವೋಟ್ ಚೋರಿ ಅಂದೋಲನಕ್ಕೆ ಸಂಪೂರ್ಣ ಬೆಂಬಲ ಇದೆ. ಊಹಾಪೋಹಾಗಳಿಗೆ ಕಿವಿಗೋಡೊದು ಬೇಡ ಎಂದು ಕೆ.ಎನ್.ರಾಜಣ್ಣ ತಮ್ಮ ಬೆಂಬಲಿಗರಿಗೆ ಬಹಿರಂಗ ಸಭೆಯ ಮೂಲಕ ಹೇಳಿದ್ದಾರೆ.