Tuesday, September 9, 2025
28.4 C
Bengaluru
Google search engine
LIVE
ಮನೆ#Exclusive NewsTop Newsಸಂಗಮೇಶ್ ಮುಂದಿನ ಜನ್ಮ ಏಕೆ.. ಈಗ್ಲೇ ಮುಸ್ಲಿಂ ಆಗಿ-ಶೋಭಾ ಕರಂದ್ಲಾಜೆ

ಸಂಗಮೇಶ್ ಮುಂದಿನ ಜನ್ಮ ಏಕೆ.. ಈಗ್ಲೇ ಮುಸ್ಲಿಂ ಆಗಿ-ಶೋಭಾ ಕರಂದ್ಲಾಜೆ

ನಾನು ನಾಲ್ಕು ಬಾರಿ ಶಾಸಕನಾಗಿದ್ದು ಮುಸ್ಲಿಂರಿಂದ. ಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಹುಟ್ಟಬೇಕು ಎಂದು ಹೇಳಿಕೆ ನೀಡಿದ್ದ ಭದ್ರಾವತಿ ಕಾಂಗ್ರೆಸ್​​ ಶಾಸಕ ಬಿ.ಕೆ ಸಂಗಮೇಶ್​​ ನೀಡಿರುವ ಹೇಳಿಕೆ ವಿಚಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ದೆಹಲಿಯಲ್ಲಿ ಮಾತನಾಡದ ಅವರು, ಸಂಗಮೇಶ ಮುಂದಿನ ಜನ್ಮದ ತನಕ ಯಾಕೆ ಕಾಯಬೇಕು? ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿ ಬಿಡಿ ಎಂದಿದ್ದಾರೆ. ಹಾರ ಹಾಕಿ ನಾವೇ ಕಳುಹಿಸಿಕೊಡ್ತೀವಿ ಅಂತ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ಮುಸ್ಲಿಂಮರು ನಿಮ್ಮ ಜೊತೆಗೆ ಇದ್ದಾರೆ, ಆದರೂ ಇನ್ನೇಷ್ಟು ಓಲೈಕೆ ಮಾಡ್ತೀರಿ? ನಿಮಗೆ ಮತ ಹಾಕಲು ಲಿಂಗಾಯತರು, ಹಿಂದುಳಿದವರು, ದಲಿತರು ಬೇಕು. ಈಗ ಗೆದ್ದ ಮೇಲೆ ಮುಸ್ಲಿಂ ಆಗಬೇಕು ಅಂತಾರೆ. ಮುಂದಿನ ಜನ್ಮದ ತನಕ ಕಾಯುವುದು ಬೇಡ, ಈಗ್ಲೇ ಹೋಗ್ಲಿ ಅಂತ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.

ಇನ್ನು ಮದ್ದೂರು ಗಲಭೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಎಲ್ಲ ಜನರ ಮಾನ ಪ್ರಾಣ ಕಾಪಾಡಬೇಕಿದ್ದ ಸರ್ಕಾರ ಏಕ ಪ್ರಕಾರವಾಗಿ ನಡೆಯುತ್ತಿದೆ. ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಿಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ಗಣೇಶ ಉತ್ಸವದಲ್ಲಿ ಹಲವು ಗಲಭೆ ನಡೆದಿದ್ದವು. ಈ ಹಿನ್ನಲೆ ಈ ವರ್ಷ ಮುಕ್ತವಾಗಿ ಹಬ್ಬ ಆಚರಿಸಲು ಅವಕಾಶ ಕೇಳಿದ್ದೇವು. ಅದಾಗ್ಯೂ ಸರ್ಕಾರ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಮದ್ದೂರಿನಲ್ಲಿ ಕಲ್ಲು ತೂರಾಟ ಆಗಿರುವುದು ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಗಣೇಶ ಮೆರವಣಿಗೆ ಎಲ್ಲಿ ಹೋಗಬೇಕು ಎಂದು ಪೊಲೀಸರು ನಿರ್ಧಾರ ಮಾಡುತ್ತಾರೆ. ಅವರೇ ನಿರ್ಧಾರ ಮಾಡಿದ ಮೇಲೆ ಗಲಭೆ ಹೇಗೆ ಆಯ್ತು? ಮಸೀದಿಯಲ್ಲಿ ಅಷ್ಟು ದೊಡ್ಡ ಪ್ರಮಾಣದ ಕಲ್ಲು ಸಂಗ್ರಹಕ್ಕೆ ಅವಕಾಶ ಹೇಗೆ ಸಿಕ್ತು? ಕಲ್ಲು ತೂರಾಟ ಮಾಡಿದವರನ್ನು ಕೂಡಲೇ ಬಂಧಿಸಬೇಕಿತ್ತು ಯಾಕೆ ಈವರೆಗೂ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

ಪರಮೇಶ್ವರ್ ಅವರು ಒಬ್ಬ ಅಸಮರ್ಥ ಗೃಹ ಸಚಿವರು. ಕೇಸ್ ವಾಪಸ್ ಪಡೆದಿದ್ದೇ ಅಲ್ಪ ಸಂಖ್ಯಾತರಿಗೆ ಇಷ್ಟು ಧೈರ್ಯ ಬರಲು ಕಾರಣ. ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾಂದ್ ಅಂತಾರೆ, ಚಾಮರಾಜನಗರದಲ್ಲಿ ಐಎಸ್‌ಐ ಧ್ವಜಗಳನ್ನು ಹಾಕಿದ್ದಾರೆ. ಔರಂಗಜೇಬ್‌ನ ಖಡ್ಗ ಪ್ರದರ್ಶನ ಮಾಡುತ್ತಾರೆ. ಅಂತಹವರ ಮೇಲೆ ಏನು ಕ್ರಮ ತೆಗೆದುಕೊಳ್ಳಲ್ಲ ಎಂದು ವಾಗ್ದಾಳಿ ನಡೆಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments