Tuesday, June 24, 2025
25.9 C
Bengaluru
Google search engine
LIVE
ಮನೆ#Exclusive NewsTop Newsರತನ್ ಟಾಟಾ ನಾಲ್ಕು ಬಾರಿ ಪ್ರೀತಿಯ ಬಲೆಗೆ ಸಿಲುಕಿದ್ದರೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ? ಮಾಹಿತಿ ಇಲ್ಲದೆ..!

ರತನ್ ಟಾಟಾ ನಾಲ್ಕು ಬಾರಿ ಪ್ರೀತಿಯ ಬಲೆಗೆ ಸಿಲುಕಿದ್ದರೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ? ಮಾಹಿತಿ ಇಲ್ಲದೆ..!

ಮುಂಬೈ: ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ ಆಗಿರುವ ರತನ್ ಟಾಟಾ ಅವರ ವೃತ್ತಿಪರ, ಉದ್ಯಮ ಕ್ಷೇತ್ರದ ಸಾಧನೆಗಳನ್ನ ಹೊರತು ಪಡಿಸಿ ವೈಯಕ್ತಿಕ ಜೀವನ ಕೂಡ ಜನರಲ್ಲಿ ಕುತೂಹಲ ಕೆರಳಿಸಿರುವುದು ನಿಜವಾಗಿದೆ. ಇದಕ್ಕೆ ಕಾರಣಗಳೂ ಇವೆ. ಹಲವು ಬಾರಿ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿದ್ದ ಅವರು ಜೀವನದ ಕೊನೆಯ ವರೆಗೂ ಸಹ ಅವಿವಾಹಿತರಾಗಿಯೇ ಉಳಿದು ಬಿಟ್ಟರು. ಟಾಟಾ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ ಎಂಬುದು ಅನೇಕರಿಗೆ ಇನ್ನು ತಿಳಿದಿಲ್ಲ.

ರತನ್ ಟಾಟಾ ಮದುವೆಯಾಗಿಲ್ಲ. ಆದರೆ ನಾಲ್ಕು ಬಾರಿ ಪ್ರೀತಿಯಲ್ಲಿ ವಿಫಲವಾಗಿದೆ ಎಂದು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಪ್ರೇಮ ಜೀವನದ ಬಗ್ಗೆ ಮಾತನಾಡಿದ್ದ ರತನ್ ಟಾಟಾ, ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿ ಪ್ರೀತಿಯಲ್ಲಿ ಬಿಳಿಸಿದೆ. ಆದರೆ ನನ್ನ ಜೀವನದ ಕಷ್ಟಕರ ಸಂದರ್ಭಗಳು ಹಾಗೂ ಅನಿವಾರ್ಯ ಸನ್ನಿವೇಶಗಳಿಂದಾಗಿ ಪ್ರೀತಿ-ಪ್ರೇಮ ಮದುವೆಯ ಹಂತವನ್ನು ತಲುಪಲಿಲ್ಲ ಎಂದು ಹೇಳಿದ್ದರು. ಇದಾದ ನಂತರ ಮತ್ತೆ ಮದುವೆಯ ಬಗ್ಗೆಯೇ ನಾನು ಯೋಚಿಸಲಿಲ್ಲ. ದೇಶದಲ್ಲಿ ಟಾಟಾ ಗ್ರೂಪ್‌ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವುದರ ಮೇಲೆ ನನ್ನ ಇಡೀ ಜೀವನವನ್ನು ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಅವರು ವಿವರಿಸಿದ್ದರು.

ಅಮೆರಿಕದಲ್ಲಿ ಅರಳಿದ ಪ್ರೀತಿ ಅಲ್ಲಿಯೇ ಬಾಡಿವೊತ್ತು

ಅಮೆರಿಕದಲ್ಲಿದ್ದ ಸಂದರ್ಭದಲ್ಲಿ ಟಾಟಾಗೆ ಅಲ್ಲಿನ ಯುವತಿಯೊಂದಿಗೆ ಪ್ರೀತಿಯು ಅರಳಿತ್ತು. ಸಂದರ್ಶನ ಒಂದರಲ್ಲಿ ಮಾತಾಡಿದ್ದ ರತನ್‌ ಟಾಟಾ, ನನ್ನ ಜೀವನದಲ್ಲಿ ಆ 2 ವರ್ಷಗಳು ತುಂಬ ಕಲರ್‌ಫುಲ್‌ ಆಗಿದ್ದವು ಎಂದಿದ್ದರು. ಆದರೆ, ಭಾರತಕ್ಕೆ ಬರಬೇಕಾದ ಸಂದರ್ಭ ಬಂದಾಗ ಆಕೆಗೆ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಭಾರತ-ಚೀನಾ ಯುದ್ಧವೂ ಪ್ರಾರಂಭವಾಯಿತು. ಕೊನೆಗೆ ಅಮೆರಿಕದಲ್ಲಿ ಬೇರೊಬ್ಬನನ್ನು ಮದುವೆಯಾದಳು. ಇದಾದ ನಂತರ ರತನ್ ಟಾಟಾ ತಮ್ಮ ಸಂಪೂರ್ಣ ಗಮನವನ್ನು ಟಾಟಾ ಗ್ರೂಪ್ ಮೇಲೆ ಕೇಂದ್ರೀಕರಿಸಿದ್ದೇನೆ ಎಂದರು. ಸಂದರ್ಶನವೊಂದರಲ್ಲಿ ಪ್ರೀತಿ ವಿಫಲವಾದ ಕಾರಣಗಳನ್ನು ವಿವರಿಸಿದ್ದ ಟಾಟಾ, ತನ್ನ ಪ್ರೇಯಸಿ ನನ್ನ ಜೀವನದಲ್ಲಿ ಇದ್ದಿದ್ದರೆ ನನ್ನ ಜೀವನದ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತಿತ್ತು ಎಂದಿದ್ದರು.

ನನಗೆ ‘ಕ್ರಶ್’ ಇದ್ದಾರೆಯೇ ಎಂದು ನೀವು ಕೇಳಿದರೆ, ನಾನು ಮದುವೆಯ ಬಗ್ಗೆ ನಾಲ್ಕು ಬಾರಿ ಗಂಭೀರವಾಗಿ ಯೋಚಿಸಿದ್ದೆ ಎಂದು ಹೇಳುತ್ತೇನೆ. ಆದರೆ ಆಗೊಮ್ಮೆ ಈಗೊಮ್ಮೆ ಯಾವುದೋ ಭಯದಿಂದ ಹಿಂದೆ ಸರಿದಿದ್ದೆ ಎಂದೂ ಹೇಳುತ್ತೇನೆ. ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಪ್ರೀತಿಯ ಬಗ್ಗೆ ತುಂಬಾ ಗಂಭೀರವಾಗಿದ್ದೆ. ಭಾರತಕ್ಕೆ ಮರಳಿದ ನಂತರ ನಾವು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದಿದ್ದರು.

ರತನ್ ಟಾಟಾ 1937 ರ ಡಿಸೆಂಬರ್ 28 ರಂದು ಜನಿಸಿದರು. ವ್ಯಕ್ತಿತ್ವದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸ್ಥಾಪಿಸಿಕೊಂಡು ಉನ್ನತ ಶಿಖರಗಳನ್ನು ಏರಿದರು. ಅಲ್ಲದೇ ಅವರು ಟಾಟಾ ಗ್ರೂಪ್ ಆಫ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹಾಗಾಗಿಯೇ ಟಾಟಾ ಇಂದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ.

ಇಂದು ಅಡುಗೆಮನೆಯಲ್ಲಿ ಬಳಸುವ ಉಪ್ಪಿನಿಂದ ಹಿಡಿದು ಆಕಾಶದಲ್ಲಿ ವಿಮಾನ ಪ್ರಯಾಣದವರೆಗೆ ಟಾಟಾ ಗ್ರೂಪ್ ಕಂಪನಿಗಳು ತಮ್ಮ ಅಸ್ತಿತ್ವವನ್ನು ಸಾರಿವೆ. ಮದುವೆಯಾಗದಿದ್ದರೂ ರತನ್ ಟಾಟಾ ತುಂಬಾ ಸಂತೋಷದ ಜೀವನ ನಡೆಸುತ್ತಿದ್ದರು. ಕಾರುಗಳಿಂದ ಹಿಡಿದು ಪಿಯಾನೋ ನುಡಿಸುವವರೆಗೆ ಎಲ್ಲದರಲ್ಲೂ ಅವರಿಗೆ ಆಸಕ್ತಿಯಿತ್ತು. 2012 ರಲ್ಲಿ 75 ನೇ ವಯಸ್ಸಿನಲ್ಲಿ ಟಾಟಾ ಸನ್ಸ್‌ನಿಂದ ನಿವೃತ್ತರಾದ ನಂತರವೂ ಅವರು ವಿವಿಧ ಚಟುವಟಿಕೆಗಳ ಮೂಲಕ ಸಕ್ರಿಯರಾಗಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments