Wednesday, January 28, 2026
20.2 C
Bengaluru
Google search engine
LIVE
ಮನೆ#Exclusive Newsಜೋಗ ಜಲಪಾತ ಯಾವ ಕಾರಣಕ್ಕೆ ಬಂದ್​ ಮಾಡುತ್ತಿದ್ದಾರೆ...? ಗೋತ್ತಾ..?

ಜೋಗ ಜಲಪಾತ ಯಾವ ಕಾರಣಕ್ಕೆ ಬಂದ್​ ಮಾಡುತ್ತಿದ್ದಾರೆ…? ಗೋತ್ತಾ..?

ಶಿವಮೊಗ್ಗ: ಕರ್ನಾಟಕದ ಪ್ರಮುಖ ಆಕರ್ಷಣೆಯಾದ ಜೋಗ್ ಫಾಲ್ಸ್ ಅಥವಾ ಜೋಗ ಜಲಪಾತ ವೀಕ್ಷಣೆಗೆ ಎರಡೂವರೆ ತಿಂಗಳ ಕಾಲ ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಜನವರಿ 1 ರಿಂದ ಮಾರ್ಚ್​ 15ರವರೆಗೆ ನಿರ್ಬಂಧಿಸಲಾಗಿದೆ. ಜೋಗ ಜಲಪಾತದ ಮುಖ್ಯ ದ್ವಾರದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬರುವ ಮನಮೋಹಕ, ಕಣ್ಮನ ಸೆಳೆಯುವ ಜೋಗ ಜಲಪಾತ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈಗ ಚಳಿಗಾಲ ಆಗಿದ್ದರಿಂದ ನೋಡಲು ಇನ್ನಷ್ಟು ಖುಷಿ ಕೊಡುತ್ತದೆ. ಹೀಗಾಗಿ ಶೈಕ್ಷಣಿಕ ಪ್ರವಾಸಕ್ಕಾಗಿ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೋಗ ಜಲಪಾತಕ್ಕೆ ಬರುವುದು ಸಾಮಾನ್ಯ.

ಕಾಮಗಾರಿ ಅನುಷ್ಠಾನದ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಸಮಸ್ಯೆ ಆಗಬಾರದು ಎಂಬ ಕಾರಣದಿಂದ ಪ್ರವೇಶ ನಿರ್ಬಂಧ ಮಾಡಲಾಗಿದೆ. ಇದಕ್ಕೆ ಜನರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನವಿ ಮಾಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments