ಹಾಸನ : ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಬೇಕು ಅಂತ ನಿಮಗೆ ಆಸೆ ಇದೆಯಾ? ರಾಜ್ಯ ಬಿಟ್ಟು ನನ್ನ ಏಕೆ ಕಳಿಸ್ತೀರಿ. ನಾನು ರಾಜ್ಯದಲ್ಲಿ ಇರೋಣ ಅಂತ ಇದ್ದೇನೆ . ಎಂಉ ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ..
ಹಾಸನದಲ್ಲಿ ಮಾತಾಡಿದ ಹೆಚ್ಡಿಕೆ ಎಲ್ಲ ಕಡೆ ಕೇಳ್ತಾರೆ, ಈ ಸಲ ನಿಂತರೆ ನೀವು ಕೇಂದ್ರದಲ್ಲಿ ಮಂತ್ರಿ ಆಗ್ತಿರಿ. ರಾಜ್ಯಕ್ಕೆ ಒಳ್ಳೆಯದಾಗುತ್ತೆ ನೀವು ನಿಲ್ಲಬೇಕು, ನಿಲ್ಲಬೇಕು ಅಂತಾರೆ. ನಾನು ಆ ವಿಷಯದಲ್ಲಿ ಈ ಕ್ಷಣದವರೆಗೂ ಯಾವುದೇ ತೀರ್ಮಾನ ಮಾಡಿಲ್ಲ ಎಂದರು.
ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲೂ ನೀವೇ ನಿಲ್ಲಬೇಕು ಅಂತಾರೆ. ಇಲ್ಲಿ ನಮ್ಮ ಹಾಸನ ಜಿಲ್ಲೆಯಲ್ಲಿ ದೇವೇಗೌಡರು ನಿಲ್ಲದೇ ಇದ್ದರೆ ನೀವೇ ಬಂದುಬಿಡಿ ಅಂತಾರೆ. ಅಭಿಮಾನದಲ್ಲಿ ಮಾತನಾಡುತ್ತಾರೆ, ಆಗಂತ ಹೇಳಿ ಎಲ್ಲ ಕಡೆ ನಾನೇ ನಿಲ್ಲಲು ಆಗುತ್ತಾ? ಮುಂದೆ ನೋಡೋಣ ಏನೇನ್ ಮಾಡಬೇಕು ಎಂದು ತಿಳಿಸಿದರು.