Wednesday, April 30, 2025
29.2 C
Bengaluru
LIVE
ಮನೆಸಿನಿಮಾಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ

ಸಿನಿಮಾದಲ್ಲಿ ಲಕ್ಷ ಲಕ್ಷ ಗಳಿಸಿದರೂ ದ್ವಾರಕೀಶ್ ಮನೆ ಮಾರಾಟ ಮಾಡಿದ್ದೇಕೆ? ಇಲ್ಲಿದೆ ಸತ್ಯ ಕಥೆ

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ (Dwarakish) ಇಂದು ನಿಧನರಾಗಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಈ ನಿರ್ದೇಶಕನ ಬದುಕಿನ ಹಿಂದೆ ಅನೇಕ ಕಹಿ ಘಟನೆಗಳು ಇದೆ.

ದ್ವಾರಕೀಶ್ ಅವರು ವಿಷ್ಣುವರ್ಧನ ಅವರ ಮೆಚ್ಚಿನ ನಿರ್ದೇಶಕ ಕೂಡ ಆಗಿದ್ದರು. ಅನೇಕ ದೊಡ್ಡ ನಟರ ಜತೆಗೆ ಇವರು ಪರದೆಯನ್ನು ಕೂಡ ಹಂಚಿಕೊಂಡಿದ್ದಾರೆ. ಇದರ ಜತೆಗೆ ಕೆಲವು ಊಹಾಪೋಹಗಳು ಕೂಡ ಸೃಷ್ಟಿಯಾಗಿತ್ತು. ನಟ ದ್ವಾರಕೀಶ್ ಅವರು ಮನೆ ಮಾರಾಟದ್ದಾರೆ ಹಾಗೂ ಎರಡು ಮದುವೆಯಾಗಿದ್ದರು ಎಂಬ ವಿಚಾರ ಸಂಚಲನವನ್ನು ಮೂಡಿಸಿತ್ತು. ಆದರೆ ಹಿಂದೆ ಇರುವ ಸತ್ಯ ಏನು? ಈ ಎಲ್ಲ ಗೊಂದಲಕ್ಕೆ ದ್ವಾರಕೀಶ್ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದರು.

ಬೆಂಗಳೂರಿನ ಎಚ್​​ಆರ್​ಎಸ್​​ ಲೇಔಟ್​​ನಲ್ಲಿರುವ ಸೈಟ್​​​ನ್ನು ಮಾಜಿ ಮುಖ್ಯಮಂತ್ರಿ ಎಸ್​​​.ಎಮ್​​ ಕೃಷ್ಣ ಅವರ ಸರ್ಕಾರ ನೀಡಿತ್ತು. ಅಲ್ಲಿಯೇ ಮನೆ ನಿರ್ಮಾಣ ಮಾಡಲಾಗಿತ್ತು. ಆದರೆ ಅದು ತುಂಬಾ ದೊಡ್ಡದಾಗಿತ್ತು. ನಾವು ಇದ್ದೇದೆ ಮೂರು. ನಮ್ಗೆ ಮೂರು ಜನಕ್ಕೆ ಅಷ್ಟು ದೊಡ್ಡ ಮನೆ ಬೇಕಾಗಿರಲಿಲ್ಲ. ಇದರ ಜತೆಗೆ ಆ ಮನೆ ನಿರ್ಮಾಣಕ್ಕೆ ಬ್ಯಾಂಕ್​​ ಲೋನ್​​​ ಕೂಡ ಮಾಡಲಾಗಿತ್ತು. ಜತೆಗೆ ಇತರ ಸಾಲಗಳು ಇದ್ದ ಕಾರಣ ನಾನು ಆ ಮನೆಯನ್ನು ಮಾರಾಟ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ನಮಗೆ ಚಿಕ್ಕ ಮನೆ ಸಾಕಿತ್ತು, ಜತೆಗೆ ನಮಗೆ ಮನೆ ಮುಖ್ಯವಲ್ಲ ಸುಖವಾದ ನಿದ್ದೆ ಬರಬೇಕು. ಅಷ್ಟು ದೊಡ್ಡ ಮನೆಯಲ್ಲಿ ನನಗೆ ಭಯ ಆಗುತ್ತಿತ್ತು. ಅದಕ್ಕಾಗಿ ಆ ಮನೆಯನ್ನು ಮಾರಾಟ ಮಾಡಿದ್ದೇವೆ. ಆ ಬಗ್ಗೆ ಯಾವುದೇ ನೋವಿಲ್ಲ. ನಾನು ಬಗ್ಗೆ ಇಂತಹ ಗೊಂದಲಗಳು ಅಭಿಮಾನಿಗಳಿಗೆ ಬೇಡ, ನಾನು ದೇವರಲ್ಲಿ ಕೇಳಿಕೊಳ್ಳುವುದು ನನ್ನ ಒಳ್ಳೆಯ ನಿರ್ಮಾಪಕ ಮಾಡು ಎಂದು ಕೇಳಿದೆ. ಹಾಗೆ ನನಗೆ ನೀಡಿದ್ದಾನೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments