ಮೇಷ ರಾಶಿ : ಇದು ಫೆಬ್ರವರಿ ತಿಂಗಳ ಎರಡನೇ ವಾರವು ಇದಾಗಿದೆ. ನಿಮ್ಮ ರಾಶಿಯಲ್ಲಿ ಗುರುವು ಸ್ಥಿತನಾಗಿದ್ದು, ದುರ್ಬಲನಲ್ಲದಿದ್ದರೂ ಅತಿಯಾದ ಬಲವಂತೂ ಇಲ್ಲ. ಆದ ಕಾರಣ ಶುಭಫಲವೂ ನಿಮಗೆ ಗುರುವಿನಿಂದ ಸಾಮಾನ್ಯವಾಗಿ ಸಿಗುವುದು. ನೀವಾಗಿಯೇ ಗುರುವಿನ ಅನುಗ್ರಹಕ್ಕೆ ಶ್ರಮಿಸಬೇಕಾಗುತ್ತದೆ. ಇನ್ನು ಷಷ್ಠದಲ್ಲಿ ಕೇತುವು ಇರುವ ಕಾರಣ ಶತ್ರುಗಳ ಚಿಂತೆ ನಿಮಗೆ ಇರದು. ಅನಾರೋಗ್ಯವೂ ನಿಮ್ಮನ್ನು ಪೀಡಿಸದು. ನವಮದಲ್ಲಿ ಶುಕ್ರನು ಇರುವ ಕಾರಣ ಗೌರವ, ಸ್ಥಾನಮಾನಗಳು ಸಿಗಲಿವೆ. ದಶಮದಲ್ಲಿ ಸೂರ್ಯ, ಬುಧ, ಕುಜರು ಇರುವ ಕಾರಣ ವೃತ್ತಿಯಲ್ಲಿ ಉನ್ನತ ಸ್ಥಾನಮಾನವು ಸಿಗಲಿದೆ. ಕುಜನು ಉಚ್ಚಸ್ಥಾನಕ್ಕೆ ಬಂದ ಕಾರಣ, ಭೂಮಿಯ ವ್ಯವಹಾರಸ್ಥರು ಉತ್ತಮ ಲಾಭವನ್ನು ಪಡೆಯುವರು. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶವಿದೆ. ದ್ವಾದಶಸ್ಥಾನದಲ್ಲಿ ರಾಹುವಿರುವನು. ಪಿತೃಗಳಿಗೆ ಸಂತೃಪ್ತಿಯನ್ನು ನೀಡಿ.
ವೃಷಭ ರಾಶಿ : ಈ ತಿಂಗಳ ಎರಡನೇ ವಾರವು ಇದಾಗಿದ್ದು ಮಿಶ್ರಫಲವು ಇದೆ. ಅಷ್ಟಮದಲ್ಲಿ ಶುಕ್ರನಿದ್ದಾನೆ. ದಾಂಪತ್ಯದಲ್ಲಿ ಸಣ್ಣ ವೈಮನಸ್ಯ ಕಾಣಿಸಿಕೊಳ್ಳಬಹುದು. ನಮದಲ್ಲಿ ರವಿ, ಕುಜ ಹಾಗೂ ಬುಧರಿರುವ ಕಾರಣ ಶುಭವು ಸಿಗಲಿದೆ. ಸಹೋದರರಿಂದ ನಿಮಗೆ ಹೆಚ್ಚು ಅನುಕೂಲತೆಗಳು ಇರುವುದು. ದಶಮದಲ್ಲಿ ಶನಿ ಇರುವ ಕಾರಣ ಅನ್ಯ ಉದ್ಯೋಗವನ್ನು ಮಾಡಲು ಬಯಸುವವರಿಗೆ ಕಷ್ಟವಾದೀತು. ನಿರುದ್ಯೋಗವು ನಿಮಗೆ ಬೇಸರ ಕೊಟ್ಟರೂ ಉದ್ಯೋಗವನ್ನು ಪಡೆಯಲು ವಿಳಂಬವಾಗಬಹುದು. ಪಂಚಮದಲ್ಲಿ ಇರುವ ಕೇತುವು ನಿಮಗೆ ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕೊಟ್ಟಾನು. ಏಕಾದಶದ ರಾಹುವು ಲಾಭವನ್ನು ಕೊಡುವವನಾದರೂ ರಾಶ್ಯಧಿಪತಿಯು ದ್ವಾದಶದಲ್ಲಿ ಇರುವ ಕಾರಣ ಅದು ಸಾಧ್ಯವಾಗದು. ಗುರುವಿನ, ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.
ಮಿಥುನ ರಾಶಿ : ಇದು ತಿಂಗಳ ಎರಡನೇ ವಾರವಾಗಿದೆ. ಮಿಶ್ರಫಲವನ್ನು ನೀವು ನಿರೀಕ್ಷಿಸಬಹುದು. ಅಷ್ಟಮದಲ್ಲಿ ಶುಭಗ್ರಹರು ಇದ್ದು ನಿಮಗೆ ಆರೋಗ್ಯದಲ್ಲಿ ದೃಢತೆಯನ್ನು ಕಾಪಾಡಿಕೊಳ್ಳಲು ಕಷ್ಟವಾದೀತು. ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವವರು ಯಶಸ್ವಿಯಾಗುವರು. ಸಪ್ತಮದಲ್ಲಿ ಶುಕ್ರನಿರುವುದು ಉತ್ತಮ ಕುಲದ ಸಂಗಾತಿಯು ನಿಮಗೆ ವಿವಾಹಕ್ಕೆ ಸಿಗುವರು. ರಾಹುವು ದಶಮದಲ್ಲಿ ಇರುವ ಕಾರಣ ಕಾರ್ಯದಲ್ಲಿ ಸಮಾಧಾನವು ಸಿಗದು. ಚತುರ್ಥದಲ್ಲಿ ಕೇತುವಿರುವ ಕಾರಣ ಸುಖವು ನಿಮಗೆ ತೃಪ್ತಿಯನ್ನು ಕೊಡದು. ಗುರುವು ನಿಮ್ಮ ಎದುರಾದ ಸಂಕಟಗಳಿಗೆ ಸಮಾಧಾನವನ್ನು ನೀಡುವನು.
ಕಟಕ ರಾಶಿ : ತಿಂಗಳ ಎರಡನೇ ವಾರವು ಇದಾಗಿದ್ದು ಹೆಚ್ಚಿನ ಶುಭಫಲವು ಇರುವುದು. ತೃತೀಯದಲ್ಲಿ ಕೇತುವಿದ್ದು ನಿಮ್ಮ ಸಹೋದರನಿಂದ ಸಹಾಕಾರವು ಕಷ್ಟವಾದೀತು. ಷಷ್ಠದಲ್ಲಿ ಶುಕ್ರನಿದ್ದು ಸಂಗಾತಿಯ ಆರೋಗ್ಯವು ಕೆಡುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ವಿಶ್ವಾಸವು ಕಡಿಮೆ ಇರುವುದು. ಸಪ್ತಮದಲ್ಲಿ ಸೂರ್ಯ, ಬುಧ, ಕುಜರು ಇದ್ದಾರೆ. ವಿವಾಹಕ್ಕೆ ಅನುಕೂಲ್ಯವಿದ್ದರೂ ದೈವಜ್ಞರ ಅಭಿಪ್ರಾಯವನ್ನು ಪಡೆದು ಮುಂದುವರಿಯಿರಿ. ಅಷ್ಟಮದಲ್ಲಿ ಶನಿಯು ಅನಾರೋಗ್ಯದಿಂದ ಉತ್ಸಾಹವನ್ನು ಕಡಿಮೆ ಮಾಡಬಹುದು. ನವಮದಲ್ಲಿ ರಾಹುವು ನಿಮಗೆ ಪೂರಕನಾಗಿಲ್ಲ. ಅನ್ಯ ಕಾರ್ಯಕ್ಕೆ ನಿಮ್ಮನ್ನು ಪ್ರೇರಿಸುವನು. ದಶಮದಲ್ಲಿ ಗುರುವು ಸಾಮನ್ಯವಾಗಿ ಇರುವುದರಿಂದ ಜಾಗರೂಕರಾಗಿ ಹೆಜ್ಜೆ ಹಾಕಬೇಕು.
ಸಿಂಹ ರಾಶಿ : ಫೆಬ್ರವರಿ ತಿಂಗಳ ಎರಡನೇ ವಾರವು ಸಾಧಾರಣ ಫಲವೇ ಇದೆ. ಗುರುವನ್ನು ಬಿಟ್ಟು ಉಳಿದ ಯಾವ ಗ್ರಹರೂ ಅತಿಯಾದ ಶುಭವನ್ನು ಮಾಡಲಾರರು. ದ್ವಿತೀಯದಲ್ಲಿ ಕೇತುವು ಸಾಲವನ್ನು ಮಾಡಿಸುವನು. ಪಂಚಮದಲ್ಲಿ ಶುಕ್ರನಿದ್ದು ಅಂದುಕೊಂಡಿದ್ದನ್ನು ಸಾಧಿಸಲು ದಾರಿ ಮಾಡಿಕೊಡುವನು. ಷಷ್ಠದಲ್ಲಿ ಕುಜ, ಬುಧ ಹಾಗೂ ರವಿ ಇರುವುದರಿಂದ ಎಂತಹ ಸಂದರ್ಭದಲ್ಲಿಯೂ ಸೋಲನ್ನು ಒಪ್ಪಿಕೊಳ್ಳದೇ ಹೋರಾಡುವಿರಿ. ಶತ್ರುಗಳ ವಿರುದ್ಧ ಜಯವನ್ನು ಸಾಧಿಸಿ, ಸಂತೋಷಗೊಳ್ಳುವಿರಿ. ಸಪ್ತಮದಲ್ಲಿರುವ ಶನಿಯು ದೂರ ಪ್ರಯಾಣವನ್ನು ಮಾಡಿಸುವನು. ಷಷ್ಠದಲ್ಲಿರುವ ರಾಹುವು ನಿಮಗೆ ಶಾರೀರಿಕ ಪೀಡೆಯನ್ನು ನೀಡುವನು. ಆದಿತ್ಯಹೃದಯ ಸ್ತೋತ್ರವನ್ನು ಪಠಿಸಿ.
ಕನ್ಯಾ ರಾಶಿ : ತಿಂಗಳ ಎರಡನೇಯ ವಾರವು ಸಾಮಾನ್ಯ ಫಲವು ಇರಲಿದೆ. ರಾಶಿಯಲ್ಲಿಯೇ ಕೇತುವು ಇರುವುದರಿಂದ ಉತ್ಸಾಹವನ್ನು ಕುಗ್ಗಿಸುವನು. ಎಲ್ಲವೂ ನಿರರ್ಥಕ ಎಂದೆನಿಸಬಹುದು. ಚತುರ್ಥದಲ್ಲಿ ಶುಕ್ರನು ಯಾವುದಾರೂ ಒಂದು ಕಡೆಯಿಂದ ಸುಖವನ್ನು ಕೊಡುವನು. ಅದೇ ನಿಮಗೆ ಚೈತನ್ಯವನ್ನು ನೀಡುವುದು. ಪಂಚಮದಲ್ಲಿರು ಕುಜ, ಬುಧ, ರವಿಯರು ಶಿಕ್ಷಣವನ್ನು ಮುಂದುವರಿಸಲು ಸಹಾಯಕರಾಗುವರು. ವಿಳಂಬವಾದರೂ ಸರ್ಕಾರದ ಕಾರ್ಯವು ಆಗಲಿದೆ. ಷಷ್ಠದಲ್ಲಿರುವ ಶನಿಯು ಶತ್ರುಗಳಿಗೆ ನಿಮ್ಮ ಮೇಲೆ ನಿರ್ಲಕ್ಷ್ಯ ಮೂಡುವಂತೆ ಮಾಡುವನು. ವಿವಾಹವನ್ನು ಮಾಡಿಕೊಳ್ಳುವಾಗ ಆತುರರಾಗುವುದು ಬೇಡ. ಮಹಾವಿಷ್ಣುವಿನ ಉಪಾಸನೆ ಅಗತ್ಯವಾಗಿ ಮಾಡಬೇಕು.
ತುಲಾ ರಾಶಿ : ಈ ರಾಶಿಯವರಿಗೆ ಈ ತಿಂಗಳ ಎರಡನೇ ವಾರವು ಶುಭಾಶುಭವು ಮಿಶ್ರವಾಗಿ ಸಿಗಲಿದೆ. ಸಪ್ತಮದ ಗುರು ಎಲ್ಲೂ ಬೀಳದಂತೆ ನಿಮ್ಮನ್ನು ಜೋಪಾನವಾಗಿ ದಡ ಸೇರಿಸುವನು. ಆದರೂ ಕೆಲವು ಸಣ್ಣ ಪುಟ್ಟ ಸಮಸ್ಯೆಯನ್ನು ನೀವು ಎದುರಿಸಬೇಕಾಗುವುದು. ದ್ವಾದಶದಲ್ಲಿ ಕೇತುವಿರುವ ಕಾರಣ ಬಂಧುಗಳ ವಿಚಾರಕ್ಕೆ ಧನವ್ಯಯವಾಗಬಹುದು. ಕುಜನು ತನ್ನ ಉಚ್ಚ ಸ್ಥಾನದಲ್ಲಿ ಇರುವ ಕಾರಣ ಬಂಧುಗಳ ಸಹಾಯದಿಂದ ನೂತನ ಭೂಮಿಯನ್ನು ಪಡೆಯಬಹುದು. ತೃತೀಯದಲ್ಲಿರುವ ಶುಕ್ರನು ಸಹೋದರಿಯಿಂದ ಪ್ರೀತಿ ಸಿಗುವಂತೆ ಮಾಡುವನು. ಷಷ್ಠದಲ್ಲಿ ರಾಹುವಿದ್ದು ಶತ್ರುಗಳಿಂದ ರಕ್ಷಿಸುವನು. ಮಹಾಲಕ್ಷ್ಮಿಯ ಉಪಾಸನೆಯನ್ನು ಮಾಡಿ.
ವೃಶ್ಚಿಕ ರಾಶಿ : ಈ ತಿಂಗಳು ಎರಡನೇ ವಾರವು ಈ ರಾಶಿಯವರಿಗೆ ಶುಭಫಲವು ಹೆಚ್ಚು ಕಾಣಿಸುವುದು. ದ್ವಿತೀಯದಲ್ಲಿರುವ ಶುಕ್ರನಿಂದ ಸಂಗಾತಿಯ ಕಡೆಯಿಂದ ಸಂಪತ್ತು, ಸಹಕಾರವು ಲಭ್ಯ. ತೃತೀಯದಲ್ಲಿ ಮೂರು ಗ್ರಹರಿದ್ದು ನಿಮ್ಮ ಸಾಮರ್ಥ್ಯವನ್ನು ತೋರಿಸಲು ಅನುಕೂಲ ಮಾಡಿಕೊಡುವರು. ಚತುರ್ಥದಲ್ಲಿ ಶನಿಯು ಕುಟುಂಬ ಸೌಖ್ಯವನ್ನು ಕಡಿಮೆಮಾಡುವನು. ಪಂಚಮದಲ್ಲಿ ರಾಹುವು ಮಕ್ಕಳಿಂದ ಪ್ರೀತಿಯು ಕಡಿಮೆ ಆದಂತೆ ತೋರುವುದು. ಉನ್ನತ ಶಿಕ್ಷಣವನ್ನು ಮಾಡಲು ಹಿಂದೇಟು ಹಾಕುವಿರಿ. ಗುರು ಷಷ್ಠದಲ್ಲಿ ಇದ್ದು ದುರ್ಬಲನಾಗಿದ್ದು ಮುನ್ನುಗ್ಗಿ ಯಾವುದನ್ನೂ ಮೈ ಮೇಲೆ ಎಳೆದುಕೊಳ್ಳುವುದು ಬೇಡ.
ಧನು ರಾಶಿ : ಈ ವಾರವು ನಿಮಗೆ ಶುಭದ ವಾರವಾಗಿದೆ. ರಾಶಿಯಲ್ಲಿ ಶುಕ್ರನಿದ್ದು ಸೌಂದರ್ಯ ಶುದ್ಧತೆಯ ಕಡೆ ಮನಸ್ಸು ಇರುವುದು. ನೂತನ ವಸ್ತುಗಳಿಂದ ಹೆಚ್ಚು ಖರೀದಿಸುವಿರಿ. ವಾಹನಸೌಖ್ಯದ ಸಾಧ್ಯತೆಯೂ ಇದೆ. ದ್ವಿತೀಯದಲ್ಲಿ ರವಿ, ಬುಧ, ಕುಜರಿದ್ದು ಭೂಮಿಗೆ, ಯಂತ್ರಗಳಿಗೆ ಸಂಬಂಧಿಸಿದ ವಿಚಾರಗಳಿಂದ ಲಾಭವು ಅಧಿಕವಿರುವುದು. ಸರ್ಕಾರದ ಕಾರ್ಯವು ವೇಗವಾಗಿ ಮುಗಿಸಿಕೊಳ್ಳುವಿರಿ. ಚತುರ್ಥದಲ್ಲಿ ರಾಹುವಿದ್ದು ಕುಟುಂಬದ ವೈಮನಸ್ಯ, ಕಲಹವು ಅಧಿಕವಾಗಬಹುದು. ಪಂಚಮದಲ್ಲಿ ನಿಮಗೆ ಗುರುವು ಶುಭಕರನಾಗಿ ಚಿಂತಿತ ಕಾರ್ಯಗಳನ್ನು ಪೂರ್ಣ ಮಾಡಿಸುವನು. ದಶಮದಲ್ಲಿ ಕೇತುವು ಉದ್ಯೋಗದಲ್ಲಿ ತೃಪ್ತಿಯನ್ನು ಕೊಡದೇ ಅನಿವಾರ್ಯವಾಗಿ ಉದ್ಯೋಗದಲ್ಲಿ ತೊಡಗಿಸುವನು.
ಮಕರ ರಾಶಿ : ಇದು ಎರಡನೇ ವಾರವಾಗಿದೆ. ನಿಮ್ಮ ರಾಶಿಯಲ್ಲಿಯೇ ಸೂರ್ಯ, ಬುಧ, ಕುಜರು ಇದ್ದಾರೆ. ಅದರಲ್ಲಿಯೂ ಕುಜನು ಉಚ್ಚನಾಗಿದ್ದಾನೆ. ಹಳೆಯ ಕಾರ್ಯಗಳನ್ನು ನೀವು ಈ ಸಮಯದಲ್ಲಿ ಮುಗಿಸಿಕೊಳ್ಳುವುದು ಉತ್ತಮ. ಜೀವನಕ್ಕೆ ಹೊಸ ಮಾರ್ಗವೂ ಸಿಗಬಹುದು. ಯಾವುದೇ ಹಿಂಜರಿಕೆ ಇಲ್ಲದೇ ಮುನ್ನುಗ್ಗಿ. ಶುಕ್ರನೂ ನಿಮ್ಮೊಡನೆ ಸೇರಿಕೊಳ್ಳುವನು. ಕುಟುಂಬದ ಬೆಂಬಲವೂ ನಿಮಗೆ ಹೆಚ್ಚು ಸಿಗುವುದು. ಬಹುದಿನದ ಕೊರಗಿಗೆ ಇನ್ನು ಪೂರ್ಣವಿರಾಮವು ಸಿಗಲಿದೆ. ವಿವಾಹಾದಿ ಮಂಗಲ ಕಾರ್ಯಗಳಿಗೆ ಸಮಯವನ್ನು ನಿರ್ಧರಿಸಿ ಮುನ್ನಡೆಯುವುದು ಉತ್ತಮ.
ಕುಂಭ ರಾಶಿ : ಈ ತಿಂಗಳ ಎರಡನೇ ವಾರವು ಸಾಮಾನ್ಯವಾಗಿ ಇರಲಿದ್ದು ಖರ್ಚುಗಳು ಅಧಿಕವಾದಂತೆ ತೋರುತ್ತದೆ. ಎಷ್ಟೇ ಪ್ರಯತ್ನದಲ್ಲಿ ಇದ್ದರೂ ಮತ್ತೆಲ್ಲೋ ಹೊರಗೆ ಹೋಗುತ್ತದೆ. ಏಕಾದಶದಲ್ಲಿ ಶುಕ್ರನು ಇದ್ದರೂ ರಾಶ್ಯಧಿಪತಿಯು ದುರ್ಬಲನಾದ ಕಾರಣ ಪೂರ್ಣಪ್ರಯೋಜನವಾಗದು. ಎಲ್ಲಿಯೋ ನಿಮ್ಮ ಪ್ರಯತ್ನವು ಇರುವುದು. ಹಣಕಾಸಿಗೆ ಕೊರತೆಯೂ ಬಂದೀತು. ಎಲ್ಲವನ್ನೂ ಯಾವುದಕ್ಕೋ ಕೊಟ್ಟುಕೊಂಡು, ಬೇಕಾದಾಗ ನಿಮಗೆ ಸಿಗದು. ಆರೋಗ್ಯವೂ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಶಿವನ ಆರಾಧನೆಯಿಂದ ಮಾನಸಿಕ ನೆಮ್ಮದಿಯು ಸಿಗುವುದು.
ಮೀನ ರಾಶಿ : ಈ ರಾಶಿಯವರಿಗೆ ಈ ವಾರವು ಮಿಶ್ರಫಲವನ್ನು ಹೇಳಿದೆ. ರಾಶಿಯಲ್ಲಿ ರಾಹುವಿದ್ದು ಮನಸ್ಸು ಒಂದೇ ಕೆಲಸ, ಒಂದೇ ವ್ಯಕ್ತಿಯನ್ನು ನಂಬದು. ಕ್ಷಣಕ್ಷಣಕ್ಕೂ ಮನಸ್ಸು ಬದಲಾಗುವ ಕಾರಣ ಅಂದುಕೊಂಡ ಕಾರ್ಯವು ಪ್ರಗತಿ ಕಾಣದು ಮತ್ತು ಪೂರ್ಣವೂ ಆಗದು. ವೈವಾಹಿಕ ಜೀವನವನ್ನು ನಿರ್ಲಕ್ಷಿಸುವಿರಿ. ಏಕಾದಶದಲ್ಲಿ ಮೂರು ಗ್ರಹರಿದ್ದು ಆದಾಯಕ್ಕೆ ಯಾವುದೇ ಆಪತ್ತು ಬರದು. ಧನ್ವಂತರಿ ಆರಾಧನೆಯನ್ನು ಮಾಡಿ, ದೇಹಾರೋಗ್ಯ ಹಾಗೂ ಮನಸ್ಸಿನ ಆರೋಗ್ಯವು ಸ್ಥಿರವಾಗಿ ಇರುವುದು.