Wednesday, January 28, 2026
18.8 C
Bengaluru
Google search engine
LIVE
ಮನೆ#Exclusive NewsTop Newsಮಾಕ್ ಡ್ರಿಲ್ ಅಂದ್ರೆ ಏನು..? 1971ರಲ್ಲಿ ಏನಾಗಿತ್ತು ಗೊತ್ತಾ?

ಮಾಕ್ ಡ್ರಿಲ್ ಅಂದ್ರೆ ಏನು..? 1971ರಲ್ಲಿ ಏನಾಗಿತ್ತು ಗೊತ್ತಾ?

ಭಾರತ- ಪಾಕಿಸ್ತಾನ ನಡುವಿನ ಉದ್ವಿಗ್ನತೆ ಉಚ್ಛಮಟ್ಟವನ್ನು ತಲುಪಿದ ಕಾರಣ ಕೇಂದ್ರ ಗೃಹ ಸಚಿವಾಲಯ, ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜೆಗಳು ಹೇಗೆ ಪ್ರಾಣ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಅವಗಾಹನೆ ಕಲ್ಪಿಸಲು ತೀರ್ಮಾನಿಸಿದೆ. ಇದರ ಭಾಗವಾಗಿ ನಾಳೆ ದೇಶದಾದ್ಯಂತ 259 ಕಡೆ ಮಾಕ್ ಡ್ರಿಲ್ ನಡೆಯಲಿದೆ. ಅಂದಾಜು 50 ವರ್ಷಗಳ ಬಳಿಕ ದೇಶಾದ್ಯಂತ ಮಾಕ್ ಡ್ರಿಲ್ ನಿರ್ವಹಿಸುತ್ತಿರುವುದು ಗಮನಾರ್ಹ.

ಕಾರ್ಗಿಲ್ ಯುದ್ಧ ನಡೆದರೂ, ಅದು ಗಡಿಭಾಗ ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ್ ಗಡಿಗೆ ಸೀಮಿತ ಆಗಿತ್ತು. ಈ ಬಾರಿ ಮಾತ್ರ ಹಾಗೆ ಆಗುವ ರೀತಿ ಕಾಣುತ್ತಿಲ್ಲ. ಹೀಗಾಗಿ ದೇಶಾದ್ಯಂತ ಪ್ರಮುಖ ಸ್ಥಳಗಳಲ್ಲಿ ಮಾಕ್ ಡ್ರಿಲ್ ನಿರ್ವಹಿಸಲು ತಯಾರಿ ನಡೆದಿದೆ.

1971ರಲ್ಲಿ ಪೂರ್ವ ಪಾಕಿಸ್ತಾನ ಅಂದರೇ ಈಗಿನ ಬಾಂಗ್ಲಾದೇಶ ಮತ್ತು ಪಶ್ಚಿಮ ಪಾಕಿಸ್ತಾನದ ಜೊತೆ ಹೋರಾಟ ಮಾಡಬೇಕಿದ್ದ ಕಾರಣ ದೇಶಾದ್ಯಂತ ಪ್ರಜೆಗಳಲ್ಲಿ ಯುದ್ಧದ ಬಗ್ಗೆ ಜಾಗೃತಿ ಮೂಡಿಸಲು ಮಾಕ್ ಡ್ರಿಲ್ ನಡೆಸಲಾಗಿತ್ತು.

ಇದಕ್ಕೆ ಮೊದಲು 1962, 1965ರ ಯುದ್ಧದ ಸಮಯದಲ್ಲಿ ಇದೇ ಮಾದರಿಯ ಮಾಕ್ ಡ್ರಿಲ್ ನಿರ್ವಹಿಸಲಾಗಿತ್ತು.

1971ರಲ್ಲಿ ಯುದ್ಧ ಶುರುವಾಗುವ ನಾಲ್ಕು ದಿನ ಮೊದಲು ಈ ರೀತಿಯ ಮಾಕ್ ಡ್ರಿಲ್ ನಿರ್ವಹಿಸಲಾಗಿತ್ತು. ಪೂರ್ವ ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಜನೆರಲ್ ಎಎಕೆ ನಿಯಾಜಿ ಢಾಕಾದಲ್ಲಿ ಶರಣಾಗತಿ ಪತ್ರಕ್ಕೆ ಸಹಿ ಹಾಕುವವರೆಗೂ ನಿರಂತರವಾಗಿ ದೇಶಾದ್ಯಂತ ಮಾಕ್ ಡ್ರಿಲ್ ನಿರ್ವಹಿಸಲಾಗಿತ್ತು.

ಅಂದು ಸಂಜೆ 6.30ಕ್ಕೆಲ್ಲಾ ಪ್ರತಿಯೊಬ್ಬರು ಮನೆ ಸೇರಿಕೊಳ್ಳುತ್ತಿದ್ದರು. ಸೈರನ್ ಕೇಳಿಸಿದ ಕೂಡಲೇ ಪ್ರತಿಯೊಬ್ಬರು ಲೈಟ್ ಆಫ್ ಮಾಡಿ ಮನೆಯಲ್ಲಿ ಸುರಕ್ಷಿತವಾಗಿ ಬಚ್ಚಿಟ್ಟುಕೊಳ್ಳುತ್ತಿದ್ದರು. ಆ ಸಮಯದಲ್ಲಿ ದೊಡ್ಡದಾಗಿ ಮಾತುಗಳನ್ನು ಸಹ ಆಡುತ್ತಿರಲಿಲ್ಲ ಎಂದು ಹಿರಿಯ ಪತ್ರಕರ್ತ ಮಧುರೇಂದ್ರ ಪ್ರಸಾದ್ ಸಿನ್ಹಾ ತಮ್ಮ ಅನುಭವಗಳನ್ನು ಅನಾವರಣ ಮಾಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments