interesting factsಸುದ್ದಿ

ಹೆಣ್ಣಾನೆಗಳ ಹಾರ್ಮೋನು ಅಸಮತೋಲನಗೊಂಡರೆ ಏನಾಗುತ್ತೆ?

ಮನುಷ್ಯರಲ್ಲಿ ಹಾರ್ಮೋನುಗಳ ಏರುಪೇರಾದರೆ ಚಿಕಿತ್ಸೆ ಪಡೆಯಲು ಹಲವು ಮಾರ್ಗಗಳಿವೆ, ಆದರೆ ಕಾಡು ಪ್ರಾಣಿಗಳ ವಿಷಯದಲ್ಲಿ ಇದು ಅತ್ಯಂತ ಸಂಕೀರ್ಣ ಮತ್ತು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಆಫ್ರಿಕಾದಲ್ಲಿ ಹೆಣ್ಣಾನೆಗಳ ಋತುಚಕ್ರವನ್ನು ನಿಯಂತ್ರಿಸಲು ನೀಡಲಾದ ಔಷಧಿಗಳು ಅಂತಿಮವಾಗಿ ಅವುಗಳ ದೇಹದಲ್ಲಿ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾದವು. ಇದರಿಂದಾಗಿ ಹೆಣ್ಣಾನೆಗಳಲ್ಲಿ ಮಿಲನದ ಅವಧಿ ಮತ್ತು ಪ್ರಮಾಣವು ಮಿತಿ ಮೀರಿತು. ಈ ಅಸ್ವಾಭಾವಿಕ ಬದಲಾವಣೆಯಿಂದಾಗಿ ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಹಾರ್ಮೋನುಗಳ ವ್ಯತ್ಯಾಸ ಉಂಟಾಗಿ ಗಂಡು ಆನೆಗಳು ವಿಪರೀತವಾಗಿ ಆಕರ್ಷಿತಗೊಳ್ಳತೊಡಗಿದವು. ನಿರ್ದಿಷ್ಟ ಅವಧಿಗಿಂತ ಹೆಚ್ಚು ಕಾಲ ಮತ್ತು ಪದೇ ಪದೇ ಮಿಲನ ಪ್ರಕ್ರಿಯೆಯಲ್ಲಿ ತೊಡಗಬೇಕಾಗಿ ಬಂದಿದ್ದರಿಂದ ಹೆಣ್ಣಾನೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಶೋಷಣೆಗೆ ಒಳಗಾದವು.

ಹಾರ್ಮೋನುಗಳ ಈ ಅಸಮತೋಲನವು ಆನೆಗಳ ನಡವಳಿಕೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅವುಗಳ ದೈಹಿಕ ಹಾಗೂ ಮಾನಸಿಕ ಸ್ಥಿತಿಯಲ್ಲಿ ಸಾಕಷ್ಟು ಏರುಪೇರುಗಳನ್ನು ಉಂಟುಮಾಡಿತು. ಈ ರೀತಿಯ ಶೋಷಣೆ ಮತ್ತು ಒತ್ತಡದಿಂದ ತತ್ತರಿಸಿದ ಆನೆಗಳು ಆ ಸಮಸ್ಯೆಯಿಂದ ಹೊರಬರಲು ಅಥವಾ ತಮ್ಮ ಆಕ್ರೋಶವನ್ನು ಹೊರಹಾಕಲು ಕಾಡಂಚಿನ ಗ್ರಾಮಗಳಿಗೆ ನುಗ್ಗತೊಡಗಿದವು. ಇದರ ಪರಿಣಾಮವಾಗಿ ವ್ಯಾಪಕ ಬೆಳೆ ಹಾನಿ ಮತ್ತು ಜೀವ ಹಾನಿಯಂತಹ ಸಂಘರ್ಷಗಳು ಸೃಷ್ಟಿಯಾದವು. ಪ್ರಕೃತಿಯ ಸಹಜ ಪ್ರಕ್ರಿಯೆಯಲ್ಲಿ ಮಾನವ ನಿರ್ಮಿತ ಹಸ್ತಕ್ಷೇಪವು ವನ್ಯಜೀವಿಗಳ ಮೇಲೆ ಹೇಗೆ ಅಮಾನವೀಯ ಪರಿಣಾಮ ಬೀರುತ್ತದೆ ಮತ್ತು ಅದು ತಿರುಗಿ ಮನುಷ್ಯರ ಮೇಲೆಯೇ ಹೇಗೆ ಪ್ರಹರಿಸುತ್ತದೆ ಎಂಬುದಕ್ಕೆ ಈ ಘಟನೆ ಒಂದು ಸ್ಪಷ್ಟ ಉದಾಹರಣೆಯಾಗಿದೆ.

Comments (0)

Your email address will not be published. Required fields are marked *

Back to top button