ವೈರಲ್ ನ್ಯೂಸ್ಸಿನಿಮಾಸುದ್ದಿ

ಸೊಸೆ ರಶ್ಮಿಕಾ ಬಗ್ಗೆ ವಿಜಯ್ ತಾಯಿ ಹೇಳಿದ್ದೇನು ..?

ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನ ಕಣ್ಮಣಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ಈಗ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ‘ಜಸ್ಟ್ ಫ್ರೆಂಡ್ಸ್’ ಎಂದೇ ಹೇಳಿಕೊಳ್ಳುತ್ತಿದ್ದ ಈ ಜೋಡಿ, ಈಗ ಅಧಿಕೃತವಾಗಿ ಹಸೆಮಣೆ ಏರಲು ಸಜ್ಜಾಗಿದೆ. ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದ ರಾಯಲ್ ಅರಮನೆಯಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಅದ್ದೂರಿ ವಿವಾಹ ನೆರವೇರಲಿದೆ. ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಭವ್ಯ ಆರತಕ್ಷತೆಯನ್ನು ಆಯೋಜಿಸಲಾಗಿದೆ.

ಈ ಮದುವೆಯ ಸುಸಂದರ್ಭದಲ್ಲಿ ವಿಜಯ್ ದೇವರಕೊಂಡ ಪೋಷಕರು ಸೊಸೆಯ ಬಗ್ಗೆ ವ್ಯಕ್ತಪಡಿಸಿದ್ದ ಹಳೆಯ ವಿಡಿಯೋವೊಂದು ಈಗ ಮತ್ತೆ ವೈರಲ್ ಆಗುತ್ತಿದೆ. ವಿಜಯ್ ಅವರ ತಾಯಿ ಮಾಧವಿ ಅವರು, “ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುವ, ಅವನ ವೃತ್ತಿಯನ್ನು ಅರ್ಥಮಾಡಿಕೊಂಡು ಅವನನ್ನು ಪ್ರೀತಿಸುವ ಹುಡುಗಿಯೇ ನಮ್ಮ ಮನೆಗೆ ಸೊಸೆಯಾಗಿ ಬರಲಿ” ಎಂದು ಹಾರೈಸಿದ್ದರು. ಅದೇ ರೀತಿ ತಂದೆ ಗೋವರ್ಧನ್ ರಾವ್ ಅವರು, “ಜಾತಿ, ಧರ್ಮದ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ, ವಿಜಯ್ ಇಷ್ಟಪಡುವ ಭಾರತೀಯ ಹುಡುಗಿಯಾದರೆ ಸಾಕು” ಎಂದು ಹೇಳುವ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಮೊದಲೇ ಗ್ರೀನ್ ಸಿಗ್ನಲ್ ನೀಡಿದ್ದರು.

ಅಭಿಮಾನಿಗಳ ಆಸೆಯಂತೆ ಈ ಮದುವೆಗೆ “The Wedding of VIROSH” ಎಂದು ಹೆಸರಿಡಲಾಗಿದೆ. ಈ ಜೋಡಿಯ ಪ್ರೀತಿಯ ಸಂಕೇತವಾಗಿ ಫೆಬ್ರವರಿ 24 ರಿಂದಲೇ ಹಳದಿ ಮತ್ತು ಸಂಗೀತ ಕಾರ್ಯಕ್ರಮಗಳು ಉದಯಪುರದಲ್ಲಿ ಶುರುವಾಗಲಿವೆ. ಭದ್ರತೆಗಾಗಿ ವಿದೇಶಿ ಏಜೆನ್ಸಿಯನ್ನು ನೇಮಿಸಲಾಗಿದ್ದು, ಖಾಸಗಿತನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

Comments (0)

Your email address will not be published. Required fields are marked *

Back to top button