ರಾಜ್ಯ ಕಾಂಗ್ರೆಸ್ನಲ್ಲಿ ಜಾತಿ ಗಣತಿ ಕಂಪನ ಸೃಷ್ಟಿ ಮಾಡಿದೆ.ವರದಿಯ ಅಂಶಗಳು ಸಚಿವರ ಕೈಸೇರಿದ್ದೇ ತಡ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಸಿಡಿದೆದ್ದಿವೆ. ಇದೇ ಕಾರಣಕ್ಕೆ ಮಂಗಳವಾರ ಒಕ್ಕಲಿಗ ಶಾಸಕರ ಸಭೆ ಕರೆದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಎಲ್ಲರ ಅಭಿಪ್ರಾಯಗಳನ್ನ ಆಲಿಸಿದ್ದಾರೆ. ಈ ವೇಳೆ ಶಾಸಕರು ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.
ಡಿಕೆ ಶಿವಕುಮಾರ್ ಮುಂದೆ ಒಕ್ಕಲಿಗ ಶಾಸಕರ ವಾದವೇನು?
ಒಕ್ಕಲಿಗ ಸಮುದಾಯದ ಅಂಕಿ ಅಂಶಗಳು ಜಾತಿ ಜನಗಣತಿಯಲ್ಲಿ ತಪ್ಪಾಗಿದೆ
ಒಕ್ಕಲಿಗ ಸಮುದಾಯಕ್ಕೆ ಆದ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಬೇಕು.
ಸಮುದಾಯದ ಜನಸಂಖ್ಯೆ ನಿಖರವಾಗಿ ದಾಖಲಿಸಲು ವ್ಯವಸ್ಥೆ ಮಾಡಿ.
ಒಂದು ಸಮಿತಿ ರಚನೆ ಮಾಡಿ 3 ತಿಂಗಳು ಕಾಲಾವಕಾಶ ನೀಡಿ
ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ಅಂಕಿ ಅಂಶ ಕಲೆಹಾಕಲು ಒತ್ತಡ