ಬೆಂಗಳುರು: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ. ಮಾದ್ಯಮಗಳೊಂದಿಗೆ ಸುಮಲತಾ ಅವರು ಮಾತನಾಡಿ, ಇದು ಕೇವಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತ್ರ ನಡೆಯುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲ ಜೈಲುಗಳಲ್ಲಿ ನಡೆಯುತ್ತಿದೆ ಎಂದಿದ್ದಾರೆ.
ಸಿನಿಮಾಗಾಗಿ ಬಣ್ಣ ಹಚ್ಚುವ ಕಲಾವಿದರು ಆಭಿನಯ ಮುಗಿದ ಮೇಲೆ ಬಣ್ಣ ಕಳಚುತ್ತಾರೆ. ಆದರೆ ಸ್ಯಾಂಡಲ್ವುಡ್ನ ಅಮ್ಮ ಮತ್ತು ಆಕೆಯ ದತ್ತು ಮಗ(ದರ್ಶನ್) ಮಾತ್ರ ತೆರೆಯ ಹಿಂದೆಯೂ ಬಣ್ಣವನ್ನು ಹಚ್ಚಿಯೇ ಬದುಕು ಸಾಗುಸುತ್ತಿದ್ದಾರೆ. ನಟನೆಯಲ್ಲಿ ಮಗ ಜಗ ಮೆಚ್ಚಿದ ಕಲಾವಿದನಾಗಿದ್ರೆ, ಆ ಮಗನನ್ನು ಮೀರಿಸೋ ಮಹಾನಟಿ ಈ ಅಭಿನೇತ್ರಿ ಸುಮಲತಾ ಅಂಬರೀಷ್ ಆಗಿದ್ದಾರೆ. ಬಹುಶಃ ಇವರಿಂದ್ದ ಜೋಗಿ ಪಾರ್ಟ್-2 ಮೂವಿ ಬಂದ್ರೆ ಮತ್ತೊಂದು ಇಂಡಸ್ಟ್ರಿ ಹಿಟ್ ಆಗಬಹುದು ಅನ್ನುವುದಲ್ಲಿ ಸಂಶಯವಿಲ್ಲ. ದರ್ಶನ್ ಅವರು ಸುಮಲತಾ ಅವರನ್ನು ಮದರ್ ಇಂಡಿಯಾ ಎಂದು ಕರೆಯುತ್ತಿದ್ದರು. ಅದೇ ಮಗ ಸೆರೆವಾಸಕ್ಕೆ ಹೋದಾಗ ಭೇಟಿಯಾಗಲು ಹೋಗದೆ ಸೈಲೆಂಟ್ ಆಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ ಮೇಲೆ ವಿನೋದ್ ರಾಜ್, ವಿನೋದ್ ಪ್ರಭಾಕರ್, ಚಿಕ್ಕಣ, ಧನ್ವೀರ್, ಸಾಧು ಕೋಕಿಲ, ರಚಿತಾ ರಾಮ್, ರಕ್ಷಿತಾ, ಪುಟ್ಟಣ್ಣಯ್ಯ, ಸಚ್ಚಿದಾನಂದ ಅಷ್ಟೇ ಯಾಕೆ ದರ್ಶನ್ನಿಂದ ಪುಡಾಂಗ ಅಂತ ಅನ್ನಿಸಿಕೊಂಡಿದ್ದ ಪ್ರೇಮ್ ಕೂಡ ಜೈಲ್ಗೆ ಬಂದಿದ್ದರು. ಆದರೆ ಸುಮಲತಾ ಮಾತ್ರ ದತ್ತು ಮಗನನ್ನ ನೋಡೋಕೆ ಬಂದಿಲ್ಲ.
ಕೇವಲ ಕರ್ನಾಟಕವಲ್ಲ, ಇಡೀ ದೇಶದಲ್ಲಿ, ಯಾಕೆ ಪ್ರಪಂಚದ ಯಾವ ಜೈಲಿಗೆ ಹೋದರೂ ಅಲ್ಲಿ ಕೈದಿಗಳಿಗೆ ಮೊಬೈಲ್, ಡ್ರಗ್ಸ್, ಸಿಗರೇಟ್ ಸೇರಿದಂತೆ ಎಲ್ಲವೂ ಸಿಗುತ್ತದೆ. ಹಾಗಂತ ಇದು ಒಳ್ಳೆಯದು ಎಂದು ನಾನು ಹೇಳುತ್ತಿಲ್ಲ. ಇದು ಕೂಡ ಭ್ರಷ್ಟಾಚಾರ, ಕಾನೂನು ವಿರುದ್ಧವಾದದ್ದು. ಇದು ಇಡೀ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ. ಆದರೆ ಒಂದು ವ್ಯಕ್ತಿಯನ್ನು ಮಾತ್ರ ಈ ವಿಚಾರದಲ್ಲಿ ಹೈಲೈಟ್ ಮಾಡುತ್ತಿರುವುದು ಸರಿಯಲ್ಲ ಎಂದು ನಟ ದರ್ಶನ್ ಪರ ಬ್ಯಾಟಿಂಗ್ ಮಾಡಿದ್ದಾರೆ.


