Freedom TV

ಬೇಗೆ ತಣಿಸಲಿದ್ದಾನಾ ವರುಣ ?: ಬೇಸಿಗೆಯಲ್ಲಿ ಮಳೆ ಮುನ್ಸೂಚನೆ!

ಬೆಂಗಳೂರು : ಹವಮಾನ ಇಲಾಖೆ ಬೇಸಿಗೆಯಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಎರಡು ವಾರಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಮಾನ ಇಲಾಖೆ ಭೀಕರ ಬರಗಾಲ, ಮತ್ತು ನೀರಿನ ಸಮಸ್ಯೆ ನಡುವೆ ಖುಷಿಯಾದ ಮುನ್ಸೂಚನೆಯನ್ನ ನೀಡಿದೆ.

ದಾವಣಗೆರೆ, ದಕ್ಷಿಣ ಕನ್ನಡ, ಬೆಂಗಳೂರು, ಮೈಸೂರು, ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯಾದ್ರೆ, ನೀರಿನ ಅಭಾವ ಕೊಂಚ ಮಟ್ಟಿಗೆ ತಗ್ಗಬಹುದು ಎಂಬ ನಿರೀಕ್ಷೆ ಇದೆ.

2023ರಲ್ಲಿ ಮಳೆಯಾಗದೆ ಬರ ಪರಿಸ್ಥಿತಿ ನಿರ್ಮಾಣವಾಗಿದ್ದ, ಈ ಬಾರಿಯ ಬೇಸಿಗೆಯಲ್ಲಿ ವರುಣಾ ಭೂಮಿಗೆ ತಂಪು ಎರೆಯಲಿದ್ದಾನೆ ಎಂದು ಹವಮಾನ ಇಲಾಖೆ ಸೂಚಿಸಿದೆ.

Comments (0)

Your email address will not be published. Required fields are marked *

Back to top button