Wednesday, April 30, 2025
24 C
Bengaluru
LIVE
ಮನೆರಾಜಕೀಯಸ್ಲಗ್ ಸರ್ಕಾರ ಬೀಳಿಸುವ ದುಸ್ಸಾಹಸಕ್ಕೆ ನಾವು ಹೋಗಲ್ಲ..

ಸ್ಲಗ್ ಸರ್ಕಾರ ಬೀಳಿಸುವ ದುಸ್ಸಾಹಸಕ್ಕೆ ನಾವು ಹೋಗಲ್ಲ..

ಧಾರವಾಡ: ಯಾವುದೇ ಸರ್ಕಾರವನ್ನು ಕೆಡುವ ದುಸ್ಸಾಹಾಸಕ್ಕೆ ನಾವಾಗಲಿ ಹೈಕಮಾಂಡ್ ಕೈ ಹಾಕೋಲ್ಲ, ಸರ್ಕಾರ ತಾನಾಗಿಯೇ ಬಿದ್ದರೆ ನಾವು ಸನ್ಯಾಸಿಗಳಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕಿತ್ತೋಗೆಯುವ ಕೆಲಸ ಮಾಡೋಲ್ಲ, ಕಾಂಗ್ರೆಸ್ ಗೆ ಜನರು ಜನಾಭಿಪ್ರಾ ಕೊಟ್ಟು ಒಳ್ಳೆಯ ಅಧಿಕಾರ ಕೊಟ್ಟಿದ್ದಾರೆ. ಆದರೆ ಭ್ರಷ್ಟಾಚಾರ ಮಾಡಲಿ ಹಾಗೂ ಪೊಲೀಸ್ ಹತ್ಯೆ ಮಾಡಲಿ ಎಂದು ಹೇಳಿಲ್ಲ. ಡಿಕೆಶಿಯವರನ್ನು ಸಿಎಂ ಮಾಡಲು ವಿಜಯೇಂದ್ರ ಪಾದಯಾತ್ರೆ ಮಾಡುತ್ತಾರೆ ಎಂಬ ಹೇಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನೊಬ್ಬ ಜನಪ್ರತಿನಿಧಿ ಪಕ್ಷದ ಹಿರಿಯರು ಗಮನಿಸುತ್ತಾರೆ. ಪಕ್ಷದ ಪ್ರಮುಖರು ಕರೆದು ಮಾತನಾಡಲಿದ್ದು, ಯಾವುದೇ ಭಿನ್ನಾಭಿಪ್ರಾಯಯಿಲ್ಲ. ಜತೆಗೆ ಸಿಎಂ, ಡಿಸಿಎಂ ನಿಮ್ಮ ಕಾಲದಲ್ಲಿ ಹಗರಣವಾಗಿತ್ತು ಎನ್ನುತ್ತಿದ್ದಾರೆ. ನಾವು ಹಗರಣ ಮಾಡಿದ್ದೇವೋ, ಬಿಟ್ಟಿದ್ದೇವೋ ಗೊತ್ತಿಲ್ಲ, ಸರ್ಕಾರ ನಿಮ್ಮದೆ ಇದೆ, ನಿಮಗೆ ಮಾಹಿತಿಯಿದ್ದರೆ ತನಿಖೆ ನಡೆಸಿ, ಇಲ್ಲವೇ ಸಿಬಿಐ ತನಿಖೆಗೆ ವಹಿಸಲಿ, ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಕೂಡಲೇ ಮುಖ್ಯಮಂತ್ರಿಗಳು ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು. ಇಮ್ನೂ ಮುಡಾ ಹಗರಣ, ವಾಲ್ಮೀಕಿ ಹಗರಣದ ಆರೋಪವನ್ನು ಕಾಂಗ್ರೆಸ್ ಸರ್ಕಾರ ಹೊತ್ತಿದೆ‌. ಈ ಹಿನ್ನೆಲೆ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜೊತೆಗೂಡಿ ಪಾದಯಾತ್ರೆ ಮಾಡುತ್ತಿದೆ. ಈಗಾಗಲೇ ಜನರಿಂದ ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ‌. ಜನರು ಸ್ವಯಂಚಾಲಿತವಾಗಿ ಭ್ರಷ್ಟಾಚಾರಿ ಸರ್ಕಾರವನ್ನು ತೆಗೆದು ಹಾಕಬೇಕೆಂದು ಹೋರಾಟಕ್ಕೆ ಬೆಂಬಲ‌ ನೀಡುತ್ತಿದ್ದಾರೆ. ಪಾದಯಾತ್ರೆ ಆರಂಭದ ಬಳಿಕ ರಾಜ್ಯಕ್ಕೆ ಕಾಂಗ್ರೆಸ್ ನಾಯಕರಾದ ಕೆ‌.ಸಿ.ವೇಣುಗೋಪಾಲ, ರಣದೀಪ್ ಸುರ್ಜೇವಾಲ್ ಬಂದಿದ್ದಾರೆ. ಇವರು ರಾಜ್ಯ ಕಾಂಗ್ರೆಸ್’ಗೆ ಶಿಕ್ಷೆ ಕೈಗೊಳ್ಳತ್ತಾರೆ ಎಂಬ ಭಾವನೆ ನಮ್ಮಲ್ಲಿತ್ತು. ಆದರೆ ಈ ನಾಯಕರು ಭ್ರಷ್ಟಾಚಾರಿಗಳಿಗೆ ಬೆಂಬಲಿಸಿದ್ದಾರೆ. ಇದನ್ನು ನೋಡಿದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಆಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸ್ಪಷ್ಟವಾಗುತ್ತಿದೆ ಎಂದು ಟಾಂಗ್ ನೀಡಿದರು. ಮುಡಾ ಹಗರಣ, ವಾಲ್ಮೀಕಿ ಹಗರಣದ ಸಮಸ್ಯೆಗಳು ದಿನದಿಂದ ದಿನಕ್ಕೆ ಜಟೀಲವಾಗುತ್ತಿದೆ. ನಾವು ಸಮಾಜವಾದಿ ಹಿನ್ನೆಲೆಯಲ್ಲಿ ಬಂದ ಸಿಎಂ ಸತ್ಯ ಹರಿಶ್ಚಂದ್ರರಾಗಿದ್ದರೇ ಯಾಕೆ ಸದನ ನಡೆದಾಗಲೇ ಭಯಬೀತರಾಗಿದ್ದರು. ಸರಿಯಾದ ಉತ್ತರ ಕೊಡದೇ ಒಂದು ದಿನದ ಮೊದಲೇ ಸದನವನ್ನು ಮೊಟಕುಗೊಳಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ಪಡೆಯಲು ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments