Thursday, November 20, 2025
19.9 C
Bengaluru
Google search engine
LIVE
ಮನೆಜಿಲ್ಲೆಸವದಿಗೂ ನಮ್ಮಗೂ 30-40 ವರ್ಷದ ಸಂಬಂಧ, ಅವರು ಹೇಳಿದ ಹಾಗೇ ಕಾಂಗ್ರೆಸಲ್ಲೇ ಇರುತ್ತಾರೆ- ಎಚ್ ಕೆ...

ಸವದಿಗೂ ನಮ್ಮಗೂ 30-40 ವರ್ಷದ ಸಂಬಂಧ, ಅವರು ಹೇಳಿದ ಹಾಗೇ ಕಾಂಗ್ರೆಸಲ್ಲೇ ಇರುತ್ತಾರೆ- ಎಚ್ ಕೆ ಪಾಟೀಲ್.

ಹುಬ್ಬಳ್ಳಿ :  ಸವದಿ ನಮ್ಮ‌ ನಡುವಿನ 30-40 ವರ್ಷದ ಸಂಬಂದವಿದೆ, ಅವರು ಏನು ಹೇಳುತ್ತಾರೆ ಹಾಗೇ ನಡೆದುಕೊಳ್ಳುತ್ತಾರೆ. ಈಗಾಗಲೇ ಕಾಂಗ್ರೆಸನಲ್ಲೇ ಇರುತ್ತೇನೆ ಅಂದಿದ್ದಾರೆ. ಹಾಗೇ ಅವರು ಕಾಂಗ್ರೆಸನಲ್ಲೇ ಇರುತ್ತಾರೆ ಎಂದು ಸಚಿವ ಹೆಚ್ ಕೆ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರವರು, ತಾವಿರೋ ಪಕ್ಷಕ್ಕೆ ಜಗದೀಶ ಶೆಟ್ಟರನ್ನು ಕರೆದುಕೊಂಡು ಹೋಗಿದ್ದಾರೆ.

ಆದರೆ ನಮ್ಮ ಪಕ್ಷಕ್ಕೆ ಬಂದಿದ್ದ ಶೆಟ್ಟರ್ ಅವರು ಹೋಗಿರುವುದಕ್ಕೆ ನಮ್ಮಗೆ ನೋವು ಇದೆ. ಲಕ್ಷ್ಮಣ ಸವದಿಯವರು ಈಗಾಗಲೇ ಕಾಂಗ್ರೆಸ್ ನಲ್ಲೇ  ಇದ್ದೇನೆ, ಇಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ನನಗೆ ಸಂಶಯವಿಲ್ಲ. ಅವರು ನಮ್ಮಲೇ ಇರುತ್ತಾರೆ. ಇನ್ನೂ ಇದೇ ವೇಳೆ ಮಂಡ್ಯ ಧ್ವಜ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಏನು ವಿವಾದವಿಲ್ಲ. ಬಿಜೆಪಿಯವರಯ ಹತಾಶೆಗೊಂಡಿದ್ದಾರೆ. ಹೀಗಾಗಿ ಭಾವನಾತ್ಮಕ ವಿಷಯಗಳ‌ ಮೇಲೆ ಏನಾದರೂ ಮಾಡಬೇಕೆಂದು ಈ ರೀತಿ ಮಾಡುತ್ತಿದ್ದಾರೆ.

ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಹೇಗಾದರೂ ಮಾಡಿ ಜನರ ಗಮನದಿಂದ ದೂರ ಮಾಡಬೇಕೆಂದು ಪ್ರಯತ್ನವೇ ಈ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರ ಏನು ಆಗುವುದಿಲ್ಲ ಜನ ಅರ್ಥ ಮಾಡಿಕೊಳ್ಳತ್ತಾರೆ. ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡಲು ಎಳ್ಳಷ್ಟು ಹಿಂದೆ ಮುಂದೆ ನೋಡಲ್ಲ. ಅದಕ್ಕೆ ಅವರ ಕೇಸರಿ ನಾಯಕರೊಂದಿಗೆ ಮಂಡ್ಯದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದೇ ಸಾಕ್ಷಿ ಎಂದು ಒರೋಕ್ಷವಾಗಿ ಕಿಡಿಕಾರಿದರು.‌

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments