ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅಥಣಿ ತಾಲೂಕಿನ ರೈತರಿಗೂ ವಕ್ಪ್ ಬೋರ್ಡ್ ಬಿಗ್ ಶಾಕ್ ನೀಡಿದೆ.
ಶಿರಹಟ್ಟಿ ಗ್ರಾಮದ ರೈತ ಬಸವರಾಜ ಅಡಿವೆಪ್ಪ ಕೊಹಳ್ಳಿ ಅವರ ಪಹಣಿ ಪತ್ರದಲ್ಲಿ ವಕ್ಪ್ ಆಸ್ತಿ ನಮೂದಾಗಿದ್ದನು ನೋಡಿ ರೈತ ಕಂಗಾಲಾಗಿದ್ದಾನೆ .
7 ಎಕರೆ 31 ಗುಂಟೆ ಜಮೀನು ಹೊಂದಿರುವ ಬಸವರಾಜ ಹಾಗೂ ಅವರ ಅಣ್ಣತಮ್ಮಂದಿರ ಹೆಸರಿನಲ್ಲಿರುವ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂದು ಹೆಸರು ನಮೂದಾಗಿದೆ.
ವಕ್ಫ ಆಸ್ತಿ ನಮೂದಾದ ಹಿನ್ನೆಲೆಯಲ್ಲಿ ರೈತನ ಕುಟುಂಬದಲ್ಲಿ ಆತಂಕ ಎದುರಾಗಿದೆ. ತಕ್ಷಣ ಸರ್ಕಾರ ಪಹಣಿಯಲ್ಲಿ ನಮೂದಾಗಿರುವ ವಕ್ಫ ಆಸ್ತಿಯನ್ನು ತೆಗೆದು ಹಾಕುವಂತೆ ರೈತರ ಆಗ್ರಹಿಸಿದ್ದಾರೆ.