Top Newsಸುದ್ದಿ

ಜೊಲ್ಲೆ ಕುಂಟುಂಬದ ಜಮೀನಿಗೂ ಅಂಟಿದ ವಕ್ಫ್ ವಕ್ರದೃಷ್ಟಿ

ಬೆಳಗಾವಿ: ಬಿಜೆಪಿಯ ಪ್ರತಿಷ್ಠಿತ ಕುಟುಂಬ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕುಟುಂಬಕ್ಕೆ ವಕ್ಫ್ ವಕ್ರದೃಷ್ಟಿ ಹೆಸರು ಅಂಟಿಕೊಂಡಿರುವ ಮಾಹಿತಿ ಹೊರಬಂದಿದೆ.

ಚಿಕ್ಕೋಡಿಯ ಶಶಿಕಲಾ ಹಾಗೂ ಅಣ್ಣಾಸಾಹೇಬ್ ಜೊಲ್ಲೆ ದಂಪತಿಗಳ ಪುತ್ರ ಬಸವಪ್ರಸಾದ ಜೊಲ್ಲೆ ಹೆಸರಲ್ಲಿರುವ ಸ್ವಗ್ರಾಮ ಯಕ್ಸಂಬಾದಲ್ಲಿ ಜಮೀನಿಗೆ ವಕ್ಫ್​​ನ ಹೆಸರು ನೊಂದಣಿ ಇರುವುದು ಕಂಡು ಬಂದಿದೆ. ಜೊತೆಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ವಕ್ಫ್ ಆಸ್ತಿಯ ಹೆಸರು ಅಂಟಿಕೊಂಡಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿನ ಗ್ರಾಮದಲ್ಲಿನ ಇದು ಪತ್ತೆಯಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೂ ವಕ್ಫ್ ಹೆಸರು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ

ಬಿಜೆಪಿಯ ಶಾಸಕಿ ಕುಟುಂಬಕ್ಕೆ ವಕ್ಫ್ ಹೆಸರು ಕಂಡು ಜನಸಾಮಾನ್ಯ ರೈತರು ದಂಗಾಗಿದ್ದಾರೆ. ಸ್ಪಷ್ಟವಾಗಿ ತಾಂತ್ರಿಕ ದೋಷದ ನಿವಾರಣೆ ನೀಡಿದ ಸರ್ಕಾರದ ವಿರುದ್ಧ ಆಕ್ರೋಶ ಕೆಲ ರೈತರು ಹೊರಹಾಕುತ್ತಿದ್ದಾರೆ.

Comments (0)

Your email address will not be published. Required fields are marked *

Back to top button