Top Newsರಾಜಕೀಯಸುದ್ದಿ

ವಕ್ಫ್​ ತಿದ್ದುಪಡಿ ಮಸೂದೆಗೆ ಜೆಪಿಸಿ ಅನುಮೋದನೆ

ವಕ್ಫ್​ ತಿದ್ದುಪಡಿ  ಮಸೂದೆಯನ್ನು ಜಂಟಿ ಸಂಸದೀಯ ಸಮಿತಿ ಸೋಮವಾರದಂದು ಅಂಗೀಕರಿಸಿತು. ಒಂದು ತಿಂಗಳಿನಿಂದ ವಕ್ಫ್ ಮಸೂದೆಯ ಬಗ್ಗೆ ಚರ್ಚೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸಮಿತಿಯು ಆಡಳಿತಾರೂಢ ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ತಿದ್ದುಪಡಿಗಳನ್ನು ಅಂಗೀಕರಿಸಿದೆ . ಆದರೆ ವಿರೋಧ ಪಕ್ಷದ ಸದಸ್ಯರ ತಿದ್ದುಪಡಿ ಪ್ರಸ್ತಾಪಗಳನ್ನು ತಿರಸ್ಕರಿಸಲಾಯಿತು.

ಸಮಿತಿಯು ಅಂಗೀಕರಿಸಿದ ತಿದ್ದುಪಡಿಗಳು ಕಾನೂನು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತವೆ ಎಂದು ಸಮಿತಿಯ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಪ್ರತಿಪಕ್ಷ ಸಂಸದರು ಸಭೆಯ ಕಲಾಪವನ್ನು ಖಂಡಿಸಿದರು. ಪಾಲ್ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲು ಮಾಡಿದ್ದಾರೆ ಎಂದು ಆರೋಪಿಸಿದರು.

Comments (0)

Your email address will not be published. Required fields are marked *

Back to top button