ಹುಬ್ಬಳ್ಳಿ: ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಧಾರವಾಡ ಜಿಲ್ಲೆಗೆ ಸ್ಮಾರ್ಟ್ ಸಿಟಿ ಯೋಜನೆ ತಂದಿದ್ದಾರೆ ಎಂದು ಶುಕ್ರವಾರ ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಯಶಸ್ವಿಗೆ ಶ್ರಮಿಸಿದ್ದೇವೆ, ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಪ್ರಹ್ಲಾದ್ ಜೋಶಿಯವರು ಗೆಲ್ಲುತ್ತಾರೆ. ಮತದಾರರು ಬಿಜೆಪಿಗೆ ಮತ ನೀಡಲು ತುಂಬಾ ಉತ್ಸುಕರಾಗಿದ್ದಾರೆ. ಧಾರವಾಡದಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಲು ಜನತೆ ಕಾಯುತ್ತಿದ್ದರೆ ಹಾಲುಮತದ ಸಮಾಜದ ಮುಖಂಡರು ಸೇರಿ ಪಕ್ಷದ ಕಾರ್ಯಕರ್ತರನ್ನು ಭೇಟೆ ಮಾಡಿದ್ದೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯವರು ವಿನೋದ ಅಸೂಟಿಯನ್ನು ಹರಕೆ ಕುರಿ ಮಾಡಿದ್ದಾರೆ. ಧಾರವಾಡ ಬಿಜೆಪಿ ಭದ್ರಕೋಟೆ ಅಂತಾ ಗೊತ್ತಿದ್ದು ಹಾಲು ಮತದ ಯುವಕನಿಗೆ ಅನ್ಯಾಯ ಮಾಡುತ್ತಿದ್ದಾರೆ. ಕಳೆದ ಬಾರಿ ನವಲಗುಂದಕ್ಕೆ ವಿನೋದ ಅಸೂಟಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಅಷ್ಟೊಂದು ಕಾಳಜಿ ಇದಿದ್ದರೆ ಆವಾಗಲೇ ಟಿಕೆಟ್ ಕೊಡಬೇಕಿತ್ತು ಎಂದರು.
ಪ್ರತಾಪ್ ಸಿಂಹರಿಗೆ ಎಂಪಿ ಟಿಕೆಟ್ ಮೀಸ್ ವಿಚಾರವಾಗಿ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಾಪ್ ಸಿಂಹ ಉತ್ತಮ ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್ ಮೀಸ್ ಆಗಿರುವ ಕುರಿತು ಪಕ್ಷದ ಹೈಕಮಾಡ್ ನಿರ್ಧಾರವಾಗಿದೆ ಒಳ್ಳೆಯ ಎಂಪಿ ಅಗಿದ್ದರು, ಒಳ್ಳೆಯ ಕೆಲಸ ಮಾಡಿದ್ದರು ಬರುವ ದಿನಗಳಲ್ಲಿ ಬೇರೆ ಜವಾಬ್ದಾರಿ ನೀಡುತ್ತಾರೆ ಎಂದು ತಿಳಿಸಿದರು.
ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com