ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ತಂಡ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಮುಂದಿನ ಋತುವಿಗೆ ಮತ್ತೊಮ್ಮೆ ನಾಯಕನಾಗಿ ಪುನರ್ ಆಯ್ಕೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿ ಐಪಿಎಲ್ 2022ರ ಮೊದಲು ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ನಂತರ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು.
2008ರಲ್ಲಿ IPL ಪ್ರಾರಂಭವಾದಾಗಿನಿಂದ RCB ಮೂರು ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಪ್ರತಿ ಬಾರಿಯೂ ರನ್ನರ್ಸ್-ಅಪ್ ಆಗಿತ್ತು. ಕೊಹ್ಲಿ 2013 ರಿಂದ 2021ರವರೆಗೆ ಆರ್‌ಸಿಬಿಯನ್ನು ಮುನ್ನಡೆಸಿದ್ದು ನಂತರ ನಾಯಕತ್ವದಿಂದ ಕೆಳಗಿಳಿದರು.
ಇನ್ನೂ ಅಧಿಕೃತ ದೃಢೀಕರಣವಿಲ್ಲವಾದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕನಾಗಿ ವಿರಾಟ್ ಕೊಹ್ಲಿ ಮರಳಲು ವೇದಿಕೆ ಸಿದ್ಧವಾಗಿದೆ ಎಂದು ತೋರುತ್ತದೆ. ಈ ಸುದ್ದಿಯನ್ನು ಆರಂಭದಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹರಡಲಾಗಿದ್ದರೂ, ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅವರು ಪ್ರತಿನಿಧಿಸುವ ಏಕೈಕ ಫ್ರಾಂಚೈಸಿಯ ಜವಾಬ್ದಾರಿಯನ್ನು ಕೊಹ್ಲಿ ವಹಿಸಿಕೊಳ್ಳುತ್ತಾರೆ.
ನಾಯಕತ್ವಕ್ಕೆ ಕೊಹ್ಲಿ ಹೊಸಬರೇನಲ್ಲ. ಈ ಹಿಂದೆ ಆರ್‌ಸಿಬಿ ಮತ್ತು ಟೀಂ ಇಂಡಿಯಾ ನಾಯಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಕೊಹ್ಲಿ ಈಗಾಗಲೇ ಮ್ಯಾನೇಜ್‌ಮೆಂಟ್‌ನೊಂದಿಗೆ ಚರ್ಚೆ ನಡೆಸಿದ್ದಾರೆ. ತಂಡಕ್ಕೆ ಮತ್ತೆ ನಾಯಕನಾಗಲು ಬಯಸುತ್ತಿದ್ದಾರೆ ಎಂದು ಮಾಧ್ಯಮ ವರದಿ ಹೇಳುತ್ತದೆ. ಅಲ್ಲಿ ನಾಯಕತ್ವದ ಕೊರತೆ ಇರಬಹುದು. ಕಳೆದ ಕೆಲವು ಋತುಗಳಲ್ಲಿ ಫಾಫ್ ಡುಪ್ಲೆಸಿಸ್ ತಂಡವನ್ನು ಮುನ್ನಡೆಸಿದ್ದರು. ಕೊಹ್ಲಿ ಇನ್ನು ಮುಂದೆ ತಂಡವನ್ನು ಮುನ್ನಡೆಸುವುದಿಲ್ಲ ಎಂದು ನಿರ್ಧರಿಸಿದರು. ಆದರೆ ಫಾಫ್ ಡುಪ್ಲೆಸಿಸ್ ಅವರಿಗೆ 40 ವರ್ಷ ವಯಸ್ಸಾಗಿದ್ದು ಅವರ ನಾಯಕತ್ವದ ಪರ ಯಾರಿಗೂ ಒಲವಿಲ್ಲ. ಅದಕ್ಕಾಗಿಯೇ ಕೊಹ್ಲಿ ಮತ್ತೆ ನಾಯಕನಾಗುತ್ತಾನೆ ಎಂಬು ವಿಚಾರ ನಂಬಲಾಗಿದೆ.
ಇದುವರೆಗೂ ಐಪಿಎಲ್ ಪ್ರಶಸ್ತಿ ಗೆಲ್ಲದ ಆರ್‌ಸಿಬಿ ಮುಂಬರುವ ಮೆಗಾ ಹರಾಜಿನ ಮುನ್ನ ಕೊಹ್ಲಿ ನಾಯಕತ್ವವನ್ನು ತನ್ನ ಕಾರ್ಯತಂತ್ರದ ಕೇಂದ್ರವನ್ನಾಗಿ ಮಾಡಿದೆ. ಕೊಹ್ಲಿ ಈ ಹಿಂದೆ 2013 ರಿಂದ 2021 ರವರೆಗೆ ಆರ್‌ಸಿಬಿ ನಾಯಕತ್ವ ವಹಿಸಿದ್ದರು. ತಂಡವನ್ನು ನಾಲ್ಕು ಬಾರಿ ಪ್ಲೇ ಆಫ್‌ಗೆ ತಲುಪಿಸುವಲ್ಲಿ ಶ್ರಮಿಸಿದ್ದರು.