ನೋಡಲಿಕ್ಕೇ ಥೇಟ್ ಬೀರು ಅಂದ್ರೆ ಆಲ್ಮೆರಾ.. ಆದರೆ, ಬೀರು ತೆರೆದರೇ ಒಳಗೆ ಕಾಣೋದು ಟಾಯ್ಲೆಟ್. ಇಂಥಾದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ರಾಜ್@ರಾಜ್ಕಾರ್ ಅನ್ನೋರು ಇದನ್ನು ಹಂಚಿಕೊಂಡಿದ್ದು, ಖುಲ್ ಜಾ ಸಿಮ್ ಸಿಮ್.. ಗೋದ್ರೇಜ್ ಕಂಪನಿ ಮಾಲಿಕ ಇದನ್ನು ನೋಡಿ ಕೋಮಾಗೆ ಹೋದರಂತೆ ಎಂದು ಟ್ವೀಟಿಸಿದ್ದಾರೆ.
https://twitter.com/i/status/1761394982320226683
ಈ ರೀತಿಯ ಟಾಯ್ಲೆಟ್ ಕಾಣೋದು ಇಂಡಿಯಾದಲ್ಲಿಮಾತ್ರ ಅನ್ಸುತ್ತೆ ಎಂದು ಒಬ್ಬರು.. ಒಳಗಡೆ ಲಾಕ್ ಸಿಸ್ಟಮ್ ಹೇಗಿದೆ ಸರ್ ಅಂತಾ ಇನ್ನೊಬ್ಬರು.. ದೇವಾಯಾರಪ್ಪಾ ನೀನು ಕಲಾವಿದ.. ಈ ಸೃಷ್ಟಿಯ ಸೃಷ್ಟಿಕರ್ತ ಎಂದು ಸತ್ಯಾ ಅನ್ನೋರು ಕಾಮೆಂಟ್ ಮಾಡಿದ್ದಾರೆ.
ಏನಿಲ್ಲಾ.. ನಾನು ನೋಡಿಲ್ಲ ಅಂತಾ ಮಗದೊಬ್ಬರು.. ಕಳ್ಳರಿಗೆ ಇದು ಗೂಗ್ಲಿ.. ಗ್ಯಾರಂಟಿ ಕ್ಲೀನ್ ಬೋಲ್ಡ್ ಎಂದು ಸನ್ನಿ ಅನ್ನೋದು ಕಾಮೆಂಟಿಸಿದ್ದಾರೆ.
ನಾರಾಯಣಸಿಂಗ್ ರಜಪೂತ್ ಅನ್ನೋರಂತೂ, ವಿಶ್ವಾಸ್ ಇದೆ.. ಇದರಲ್ಲಿ ಏನೋ ವಿಶೇಷ ಇದೆ.. ಎಂಬ ಜೆಕೆ ಸೀಮೆಂಟ್ ಜಾಹೀರಾತಿನ ಡೈಲಾಗ್ ಅನ್ನು ಇಲ್ಲಿಗೆ ಸಮೀಕರಿಸಿದ್ದಾರೆ.
ಚುರುಕೇಶ ಎಂಬ ನೆಟ್ಟಿಗರು ವಂಡರ್, ಹವ್ ಇಸ್ ಹೀ ಯೂಸಿಂಗ್ ಬೀರು ಒಳಗಿರೋ ಲಾಕರ್ ಎಂಬ ತರ್ಲೆ ಪ್ರಶ್ನೆ ಕೇಳಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಸಖತ್ ವೈರಲ್ ಆಗ್ತಿದೆ.. ನೀವು ಒಮ್ಮೆ ನೋಡಿ ಎಂಜಾಯ್ ಮಾಡಿ.