Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsಹುಡುಗಿ ಸಿಗದೇ ಕುಕ್ಕರನ್ನು ಮದುವೆಯಾದ ಯುವಕ

ಹುಡುಗಿ ಸಿಗದೇ ಕುಕ್ಕರನ್ನು ಮದುವೆಯಾದ ಯುವಕ

ಇಂಡೋನೇಷ್ಯಾದ ಯುವಕನೊಬ್ಬನ ವಿಶಿಷ್ಟ ವಿವಾಹವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಸಲಿಗೆ, ಈ ಯುವಕ ಹುಡುಗಿಯನ್ನು ಮದುವೆಯಾಗಿಲ್ಲ ಆದರೆ ಕುಕ್ಕರ್ ಅನ್ನು ಮದುವೆಯಾಗಿದ್ದಾನೆ. ಈ ಯುವಕನ ಮದುವೆಯ ಫೋಟೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಧುಮಗ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕುಕ್ಕರ್​ನ ಮೇಲ್ಭಾಗಕ್ಕೆ ಹುಡುಗಿಯಂತೆ ಶಾಲು ಹೊಂದಿಸಿ,ಮುತ್ತಿಡುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ.

 

ಈ ಯುವಕ ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದ್ದು, ಸಾಕಷ್ಟು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ. ಹುಡುಗಿ ಸಿಗದೇ ಬೇಸತ್ತು ಈಗ ಕುಕ್ಕರನ್ನೇ ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಕುಕ್ಕರ್​ ತನಗೆ ಯಾವತ್ತೂ ಮೋಸ ಮಾಡಲ್ಲ. ಜೊತೆಗೆ ಅಡುಗೆಯಲ್ಲಿ ಪರಿಣಿತಳು’ ಹಾಗಾಗಿ ಒಡನಾಡಿಯಾಗಿ ಆರಿಸಿಕೊಳ್ಳುತ್ತಿದ್ದೇನೆ ಎಂದು ಕುಕ್ಕರ್​ ಜೊತೆ ಮದುವೆಯ ಬಗ್ಗೆ ಈತ ಹೇಳಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಆದರೆ ಮದುವೆಯಾಗಿ ನಾಲ್ಕೇ ದಿನದಲ್ಲಿ ಪತ್ನಿ ಅಂದರೆ ಕುಕ್ಕರ್​ಗೆ ವಿಚ್ಛೇದನ ನೀಡಿರುವುದು ವರದಿಯಾಗಿದೆ.

ಈತನ ಮದುವೆಯ ಫೋಟೋ ಎಲ್ಲೆಡೆ ವೈರಲ್​​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. “ಪ್ರಚಾರವನ್ನು ಪಡೆಯಲು ಕೆಲವರು ಹೇಗೆ ಅಸಾಮಾನ್ಯ ಮತ್ತು ವಿವಾದಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈತ ಸಾಕ್ಷಿ.” ಎಂದು ನೆಟ್ಟಿಗರೊಬ್ಬರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments