ಈ ಹುಡುಗಿ ಗೊತ್ತಲ್ಲ. ಕುಸ್ತಿ ಫೆಡರೇಷನ್ ನ ವಿಕೃತ ಕಾಮುಕ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಹೋರಾಡಿದ ಧೀರೆ. ಇಡೀ ಸರ್ಕಾರವೇ ಅವನ ರಕ್ಷಣೆಗೆ ನಿಂತರು ಎದೆಗುಂದದೆ ಬ್ರಿಜ್ ಭೂಷಣನ ಕಾಮಕಾಂಡವನ್ನು ಬಯಲಿಗೆಳೆದಾಕೆ. ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು. ಆಕೆ ಭಾರತಕ್ಕೆ ಪದಕ ತರುವುದು ಇನ್ನು ಬಹುತೇಕ ನಿಶ್ಚಿತ.
ಇದು ವಿನೇಶ್ ಅವರ ಚೊಚ್ಚಲ ಒಲಿಂಪಿಕ್ ಸೆಮಿಫೈನಲ್ ಆಗಿದೆ. ಫೈನಲ್ ಸ್ಥಾನಕ್ಕಾಗಿ ಕ್ಯೂಬಾದ ಯೂಸ್ನಿಲಿಸ್ ಗುಜ್ಮನ್ ಅವರನ್ನು ಎದುರಿಸಲಿದ್ದಾರೆ. ಜಪಾನಿನ ಕುಸ್ತಿಪಟು ಹಾಲಿ ಒಲಿಂಪಿಕ್ ಚಾಂಪಿಯನ್ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಟೋಕಿಯೊ ಗೇಮ್ಸ್‌ನಲ್ಲಿ ಒಂದೇ ಒಂದು ಅಂಕ ಬಿಟ್ಟುಕೊಡದೆ ಚಿನ್ನ ಗೆದ್ದಿದ್ದರು.