ಧರ್ಮಸ್ಥಳ ಶವ ಹೂತಿಟ್ಟ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೂರ್ವಪರ ಯೋಚನೆ ಇಲ್ಲದೇ ಎಸ್‌ಐಟಿಗೆ ಒಪ್ಪಿಸಿದ್ದಾರೆ. ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕೆಂದರೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ..
ಧರ್ಮಸ್ಥಳ ಪ್ರಕರಣದಲ್ಲಿ ಕೋಟ್ಯಾಂತರ ಭಕ್ತರ ನಂಬಿಕೆಗೆ ಘಾಸಿಯಾಗಿದೆ. ಶ್ರೀ ಕ್ಷೇತ್ರದ ಬಗ್ಗೆ ಪ್ರಚಾರಗಳು, ಅಪಪ್ರಚಾರಗಳು ನೆಯುತ್ತಿದೆ. ಇದು ಭಕ್ತರಿಗೆ ನೋವುಂಟು ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಎಸ್‌ಐಟಿ ತನಿಖೆಗೆ ಕೊಡುವುದರಲ್ಲಿ ಎಡವಿದ್ದಾರೆ. ಇದು ಬಹಳ ಗಂಭೀರವಾದ ವಿಚಾರ ಆಗಿದೆ. ಸೀನಿಯರ್ ಅಡ್ವೊಕೇಟ್ ಇದರ ಬಗ್ಗೆ ನಿಯಮ ಮಾಡಬೇಕು ಎಂದಿದ್ದಾರೆ.. ಹೀಗಾಗಿ ನಾಡಿನ ಜನರ ಪರವಾಗಿ ಮನವಿ ಮಾಡುತ್ತಿದ್ದೇನೆ. ಇದರ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದರೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಹೇಳಿದ್ದಾರೆ.
ಪ್ರಕರಣವನ್ನು ಎನ್‌ಐಎಗೆ ವಹಿಸುವುದರಿಂದ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಬರುತ್ತದೆ. ಸಿಎಂ ಸಿದ್ದರಾಮಯ್ಯ ಅವರು ತಡ ಮಾಡದೇ ತಪ್ಪಿಸಿಕೊಳ್ಳಲು ಹೋಗದೇ, ಎನ್‌ಐಎಗೆ ಪ್ರಕರಣ ಕೊಡಬೇಕು. ಇದೇ ಅಗ್ರಹ ಇಟ್ಟುಕೊಂಡು ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋಗೆ ಕರೆ ಕೊಡುತ್ತಿದ್ದೇವೆ. ಆಗಿರುವ ಅಪಪ್ರಚಾರಕ್ಕೆ, ಪ್ರಕರಣ ಎನ್‌ಐಎಗೆ ವಹಿಸಲು ಒತ್ತಾಯ ಮಾಡುತ್ತಾ, ಧರ್ಮಸ್ಥಳ ಚಲೋ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಸಮಾವೇಶ ಕೂಡ ಮಾಡುತ್ತೇವೆ ಎಂದು ಹೇಳಿದ್ದಾರೆ.