ವಿಜಯಪುರ : ಐಇಡಿಎಸ್ಎಸ್ ಯೋಜನೆ ಅನುಷ್ಟಾನ ಮಾಡುವಲ್ಲಿ ಗಂಭೀರ ಕರ್ತವ್ಯ ನಿರ್ಲಕ್ಷ್ಯ ಆರೋಪದ ಹಿನ್ನಲೆಯಲ್ಲಿ ವಿಜಯಪುರ ಡಿಡಿಪಿಐ ಹಾಗೂ ವಿಜಯಪುರ ಡಯಟ್ ನ ಹಿರಿಯ ಉಪನ್ಯಾಸಕರಿಬ್ಬರ ಅಮಾನತು ಮಾಡಲಾಗಿದೆ.
ಐಇಡಿಎಸ್ಎಸ್ ಯೋಜನೆ ಅನುಷ್ಠಾನ ಮಾಡುವಲ್ಲಿ ಕರ್ತವ್ಯ ನಿರ್ಲಕ್ಷ್ಯ ಆರೋಪ ಹಿನ್ನಲೆ ಸಾರ್ವಜನಿಕ ಶಿಕ್ಷಣ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಆದೇಶ ಮಾಡಿದ್ದಾರೆ.ವಿಜಯಪುರ ಡಿಡಿಪಿಐ ಎನ್ ಎಚ್ ನಾಗೂರ, ಡಯಟ್ ಹಿರಿಯ ಉಪನ್ಯಾಸಕರಾದ ಎಸ್ ಎ ಮುಜಾವರ, ಎ ಎಸ್ ಹತ್ತಳ್ಳಿ ಅಮಾನತ್ತು ಮಾಡಲಾಗಿದೆ.
ಇನ್ನು, 2009-10 ಹಾಗೂ 2011-12 ರಲ್ಲಿ ಐಇಡಿಎಸ್ಎಸ್ ಯೋಜನೆ ಅನುದಾನ ದುರುಪಯೋಗ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲು ಆಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪರಿಂದ ಆಮಾನತ್ತು ಆದೇಶ ಹೊರಡಿಸಲಾಗಿದೆ.