ವಿಜಯಪುರ : ವಿಜಯಪುರ ನಗರದಲ್ಲಿ ಇಂದು ವೃಕ್ಷಥಾನ್ ಮ್ಯಾರಥಾನ್ 2023 ಆರಂಭವಾಗಿದೆ. ಸಚಿವ ಎಂ ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಚಾಲನೆ ನೀಡಿದರು.
ಪರಿಸರ ಹಾಗೂ ಸ್ಮಾರಕಗಳ ಸಂರಕ್ಷಣೆಯ ಜಾಗೃತಿಗಾಗಿ ಮ್ಯಾರಥಾನ್ ನಡೆದಿದ್ದು, ವಿಜಯಪುರ ನಗರದ ಡಾ. ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಿಂದ ಗೋಳಗುಮ್ಮಟ ಮಾರ್ಗವಾಗಿ ಮ್ಯಾರಥಾನ್ ರನ್ ನಡೆಸಿದರು.
ಐದು ಕಿಲೋಮೀಟರ್ ಮ್ಯಾರಥಾನ್ ನಲ್ಲಿ ಸಚಿವ ಎಂ ಬಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ , ವಿವಿಧ ವಿಭಾಗಗಳ ಮ್ಯಾರಥಾನ್ ಗಳಲ್ಲಿ 10ಸಾವಿರಕ್ಕೂ ಅಧಿಕ ಓಟಗಾರರು ಭಾಗವಹಿಸಿದರು.